ಅಂಬಾರಿ ಬರುತ್ತಿದೆ. ಆದರೆ ಇದು ಆನೆ ಇಲ್ಲದ ಅಂಬಾರಿ. ಈ ಅಂಬಾರಿಯಲ್ಲಿ ಬರೀ ಪ್ರೀತಿ-ಪ್ರೇಮಗಳು ಪಯಣಿಸುತ್ತವೆ. ಇಲ್ಲಿ ಯಾವುದೇ ಲಾಂಗ್, ಮಚ್ಚುಗಳಿಗೆ ಅವಕಾಶವಿಲ್ಲ. ಇದು ಯೋಗೇಶ್ ನಾಯಕನಾಗಿ ನಟಿಸುತ್ತಿರುವ ಅಂಬಾರಿ ಚಿತ್ರದ ಒನ್‌ಲೈನ್ ಸ್ಟೋರಿ.
ದುನಿಯಾ, ನಂದ ಲವ್ಸ್ ನಂದಿತಾಗಳಲ್ಲಿ ಲಾಂಗ್-ಮಚ್ಚು ಹಿಡಿದ ಯೋಗೇಶ್ ಅಂಬಾರಿಯಲ್ಲಿ ಅವೆಲ್ಲವನ್ನು ಬಿಸಾಕಿ ಬರೀ ಪ್ರೀತಿಯನ್ನು ಮಾತ್ರ ಹಿಡಿದಿದ್ದಾರೆ. ತನ್ನನ್ನು ರಕ್ಷಿಸಿಕೊಳ್ಳಲು ನಾಯಕ ಫೈಟ್ ಮಾಡುತ್ತಾನೆ ಎಂದರು ನಿರ್ದೇಶಕ ಅರ್ಜುನ್. ಹಿಂದೆ ಚಿತ್ರಗಳಿಗೆ ಹಾಡು ಬರೆಯುತ್ತಿದ್ದ ಅರ್ಜುನ್ ಇಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಯಾವುದೇ ಆಶ್ಲೀಲ ದೃಶ್ಯಗಳಾಗಲಿ, ಕಿಸ್ಸಿಂಗ್‌ಗಳಾಗಲಿ ಇಲ್ಲವಂತೆ. ನಾಯಕಿಯನ್ನು ದೇವತೆಯಂತೆ ತೋರಿಸಲಾಗಿದೆ. ಇಲ್ಲಿ ಪ್ರೀತಿಯ ಪಯಣ ಅಂಬಾರಿಯಲ್ಲಿ ಸಾಗುತ್ತದೆ ಎನ್ನುತ್ತಾರೆ ಅರ್ಜುನ್. ಸುಪ್ರೀತಾ ನಾಯಕಿಯಾಗಿ ನಟಿಸುತ್ತಿದ್ದಾರೆ.
ಚಿತ್ರದಲ್ಲಿ 5 ಹಾಡುಗಳು ಹಾಗೂ ಮೂರು ಸಾಂಗ್ ಬಿಟ್ಗ ಳಿವೆಯಂತೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ದುನಿಯಾ ಖ್ಯಾತಿಯ ಸತ್ಯಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಯೋಗೇಶ್ ತಂದೆ ಸಿದ್ಧರಾಜು ಚಿತ್ರ ನಿರ್ಮಿಸುತ್ತಿದ್ದಾರೆ.
|