ಹುಡುಗಿ ತಾನು ಓದಿದ ಕಾಲೇಜಿನಲ್ಲೇ ಉಪನ್ಯಾಸಕಿಯಾಗಿ ಸೇರಿಕೊಳ್ಳುತ್ತಾಳೆ. ಅದೇ ದಿನ ಸಂಜೆ ಗ್ರಂಥಾಲಯದಲ್ಲಿ ಓದುತ್ತಿದ್ದಾಗ ಅಲ್ಲಿನ ನೌಕರ ಇವಳನ್ನು ಗಮನಿಸದೆ ಬಾಗಿಲು ಹಾಕುತ್ತಾನೆ. ಹುಡುಗಿ ಫೋನ್ ಮಾಡಲು ಹೋಗಿ ಯಾವುದೇ ರಾಂಗ್ ನಂಬರ್‌ಗೆ ಫೋನ್ ಮಾಡುತ್ತಾಳೆ.
ಆ ಕರೆ ನಾಯಕನಿಗೆ ಹೋಗುತ್ತದೆ. ಇವರಿಬ್ಬರ ನಡುವೆ ಒಂದು ಫ್ಲಾಷ್ಬಾಕ್ ಇರುತ್ತದೆ. ಸೇಡು ತೀರಿಸಿಕೊಳ್ಳಲು ಬರುವ ನಾಯಕನ ಕಲ್ಲಿನಂತಹ ಮನಸ್ಸು ಹೂವಾಗಿ ಅರಳುತ್ತದೆ. ಇದೇನು ಉದ್ದ ಕಥೆ ಎಂದು ಆಶ್ವರ್ಯವೇ? ಇತ್ತೀಚೆಗೆ ಮುಹೂರ್ತ ಕಂಡ ಪ್ರಿಯಾ ಮೈ ಡಾರ್ಲಿಂಗ್ ಚಿತ್ರದ ಕಥೆ.
ಚಿತ್ರವನ್ನು ಹನುಮಂತಯ್ಯ ನಿರ್ಮಿಸುತ್ತಿದ್ದಾರೆ. ಆರು ವರ್ಷಗಳ ಹಿಂದೆ ಕಾರ್ಮುಗಿಲು ಚಿತ್ರ ನಿರ್ದೇಶಿಸಿದ ವೆಂಕಟೇಶ್ ಪ್ರಸಾದ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಗಂಧರ್ವ ಸಂಗೀತ ನೀಡುವುದರ ಜೊತೆಗೆ ಸಂಭಾಷಣೆ ಕೂಡಾ ಬರೆದಿದ್ದಾರೆ.
ಇದು 70 ರಿಂದ 80 ಲಕ್ಷ ರೂ. ಬಜೆಟ್ ಚಿತ್ರ. ಮುಹೂರ್ತ ನಡೆಯುವಷ್ಟರ ಹೊತ್ತಿಗೆ 35 ಲಕ್ಷ ಮುಗಿದಿದೆ. ಚಿತ್ರದಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸೋನು ನಿಗಮ್‌ರಿಂದ ಒಂದು ಹಾಡು ಹಾಡಿಸಲು ಮೇನಲ್ಲಿ ಡೆಟ್ ಪಡೆದಿದ್ದಾರೆ. ಸೋನು ನಿಗಮ್ ಒಂದು ಹಾಡಿಗೆ ಎರಡು ಲಕ್ಷ ರೂ. ಸಂಭಾವನೆ ನಿಗದಿಪಡಿಸಿದ್ದಾರೆ. ಸೂರ್ಯ ನಾಯಕನಾಗಿ ಹಾಗೂ ಮಲಯಾಳಿ ಬೆಡಗಿ ದಿವ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ.
|