ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸದ್ಯವೇ ತೆರೆಗೇರಲಿರುವ ನಂದಾದೀಪ
MOKSHA
ನಂದಾದೀಪ ಚಿತ್ರದ ರೀರೆಕಾರ್ಡಿಂಗ್ ಹಾಗೂ ಮಿಕ್ಸಿಂಗ್ ಕಾರ್ಯ ಗುರುರಾಜ್ ಹೊಸಕೋಟೆ ಸಂಗೀತ ನಿರ್ದೇಶನದಲ್ಲಿ ಇತ್ತೀಚೆಗೆ ಆಶ್ವಿನಿ ಸ್ಟುಡಿಯೋದಲ್ಲಿ ಮುಕ್ತಾಯಗೊಂಡಿತು. ಚಿತ್ರ ಸದ್ಯದಲ್ಲಿಯೇ ಸೆನ್ಸಾರ್ ಮಂಡಳಿ ವೀಕ್ಷಣೆಗೆ ಹೋಗಲಿದೆ ಎಂದು ನಿಮಾಪಕ ಅಣಜಿ ನಾಗರಾಜ್ ತಿಳಿಸಿದ್ದಾರೆ.

ನಮನ ಫಿಲಂಸ್ ಲಾಂಛನದಡಿಯಲ್ಲಿ, ದರ್ಶನ್ ಅರ್ಪಿಸಿ, ಅಣಜಿ ನಾಗರಾಜ್ ನಿರ್ಮಿಸುತ್ತಿರುವ ಗ್ರಾಮೀಣ ಸೊಗಡಿನ ಈ ಚಿತ್ರದಲ್ಲಿ ದೇವರಾಜ್ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಎಂ.ಆರ್.ಸೀನು ಛಾಯಾಗ್ರಹಣ, ಗುರುರಾಜ್ ಹೊಸಕೋಟೆ ಸಾಹಿತ್ಯ-ಸಂಗೀತ; ತ್ರಿಭುವನ್, ನಾಗೇಶ್ ನೃತ್ಯ, ಲಕ್ಷ್ಮಣ್ ರೆಡ್ಡಿಯವರ ಸಂಕಲನವಿದೆ. ನಾಗೇಂದ್ರ ಪ್ರಸಾದ್ ಕೂಡಾ ಎರಡು ಗೀತೆಗಳನ್ನು ರಚಿಸಿದ್ದಾರೆ.
MOKSHA


ತಾರಾಗಣದಲ್ಲಿ ಶ್ರುತಿ, ಸಂಜನಾ, ಮಾ.ಮನೋಜ್, ಮುನಿ, ಗುರುರಾಜ್ ಹೊಸಕೋಟೆ, ಕರಿಬಸವಯ್ಯ ಮುಂತಾದವರು ಇದ್ದಾರೆ. ಚಿತ್ರ ಮೇ ಕೊನೆ ವಾರದಲ್ಲಿ ಬಿಡುಗಡೆಯಾಗುವ ನೀರೀಕ್ಷೆ ಇದೆ.
ಮತ್ತಷ್ಟು
ಸಿನಿಮಾ ನಟನೆಗಾಗಿ ಅಹ್ವಾನ
ಐಟಂಸಾಂಗ್‌ನಲ್ಲಿ ಅಂಬರೀಶ್
ಸದ್ಯದಲ್ಲೇ ಬಂಧುಬಳಗ
ಮಯೂರ್‌ನ ಹೊಸ ಗೆಟಪ್
ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್
ಪ್ರಿಯಾ ಮೈ ಡಾರ್ಲಿಂಗ್