ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಮ್ಮೆಜಮಾನ್ರಿಗೆ ಮುಹೂರ್ತ
PTI
ಇತ್ತೀಚೆಗೆ ನಮ್ಮೆಜಮಾನ್ರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಟಿ.ಎಸ್.ನಾಗಾಭರಣರ ಅವರು ವಿಷ್ಣು ಬಗೆಗಿನ ತಮ್ಮ ಅಭಿಮಾನವನ್ನು ಬಿಚ್ಚಿಟ್ಟರು. "ನಾನು 27 ವರ್ಷಗಳ ಬಳಿಕ ವಿಷ್ಣುವರ್ಧನ್ ಅವರ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದೇನೆ. ನಿಜಕ್ಕೂ ಅಂತಹ ಶ್ರೇಷ್ಠ ನಟನ ಚಿತ್ರ ನಿರ್ಮಿಸುವುದಕ್ಕೆ ಸಂತಸವಾಗುತ್ತಿದೆ ಎಂದು ಹೊಗಳಿದರು.

ಚಿತ್ರಕಥೆ ಸಂಪೂರ್ಣ ಸಿದ್ಧಪಡಿಸಿದ ನಂತರವೇ ಚಿತ್ರೀಕರಣ ಪ್ರಾರಂಭಿಸಿದೆ. ವಿಷ್ಣುಗೆ ಕಥೆ ಒಪ್ಪಿಸುವುದು ಸುಲಭವಲ್ಲ. ಅವರು ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಆದ್ದರಿಂದ ಕಥೆಯನ್ನು ಸಾಕಷ್ಟು ಪರಿಷ್ಕರಿಸಿ ಅವರಿಗೆ ಹೇಳಿದೆ. ಅವರು ಕೆಲವು ಸಣ್ಣಪುಟ್ಟ ಸಲಹೆಗಳನ್ನು ನೀಡಿ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದರು ಎಂದು ಹೇಳಿದರು ನಾಗಾಭರಣ.

ನಾಗಾಭರಣ ಕ್ರಿಯಾಶೀಲ ನಿರ್ದೇಶಕರು. ಅವರ ಕೆಲಸದ ಬಗ್ಗೆ ಎರಡು ಮಾತಿಲ್ಲ. ಚಿತ್ರ ಗೆಲ್ಲುವುದು ಅಥವಾ ಸೋಲುವುದು ಪ್ರೇಕ್ಷಕರಿಗೆ ಬಿಟ್ಟಿದ್ದು ಎಂದರು ಸಾಹಸಸಿಂಹ ವಿಷ್ಣು. ಆಪ್ತಮಿತ್ರ ಚಿತ್ರದಲ್ಲಿ ವಿಷ್ಣು ಅವರೊಂದಿಗೆ ನಟಿಸಿದ ರಮೇಶ್ ಅರವಿಂದ್ ಇಲ್ಲಿ ಪುನ: ವಿಷ್ಣು ಜೊತೆ ನಟಿಸುತ್ತಿದ್ದಾರೆ. ವಿಜಯ್ ರಾಘವೇಂದ್ರ, ಅನಂತನಾಗ್, ಕನ್ನಡವರೇ ಆಗಿದ್ದು ಮಲಯಾಳಂ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಲಕ್ಷ್ಮೀ ಗೋಪಾಲಸ್ವಾಮಿ ಮೊದಲಾದವರು ತಾರಾಗಣದಲ್ಲಿರುವ ಇತರರು. ಗಜ ಚಿತ್ರದ ಮೂಲಕ ಪ್ರೇಕ್ಷಕರ ಮನಸೂರೆಗೊಂಡ ನವ್ಯಾ ನಾಯರ್ ಈ ಚಿತ್ರದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ.
ಮತ್ತಷ್ಟು
ಪರಮೇಶ ಪಾನ್ವಾಲಾನಿಗೆ ಪುನೀತ್ ಕ್ಲಾಪ್
ಸದ್ಯವೇ ತೆರೆಗೇರಲಿರುವ ನಂದಾದೀಪ
ಸಿನಿಮಾ ನಟನೆಗಾಗಿ ಅಹ್ವಾನ
ಐಟಂಸಾಂಗ್‌ನಲ್ಲಿ ಅಂಬರೀಶ್
ಸದ್ಯದಲ್ಲೇ ಬಂಧುಬಳಗ
ಮಯೂರ್‌ನ ಹೊಸ ಗೆಟಪ್