ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾಮಿನಿ ಪ್ಯಾಕಪ್; ಇನ್ನೊಬ್ಬಳಿಗೆ ಸಿದ್ಧತೆ
MOKSHA
ಪೂಜಾ ಗಾಂಧಿಗೆ ಈಗ ಬೇಡಿಕೆಯೋ ಬೇಡಿಕೆ. ಅವರ ಅಭಿನಯಕ್ಕೆ ಮೆಚ್ಚಿ ಬೇಡಿಕೆ ಸಿಕ್ಕಿದೆಯೋ ಅಥವಾ ಅವರ ಕಾಲ್ಶೀಟ್ ನೀಡುವ ಉದಾರ ಗುಣವೋ, ಇಲ್ಲ ಕುಣಿಯುತ್ತಿರುವ ಅದೃಷ್ಟವೋ ಅಂತೂ ಹೆಚ್ಚಿನ ಚಿತ್ರಗಳಲ್ಲಿ ಪೂಜಾ ನಟಿಸುತ್ತಿರುವುದಂತು ನಿಜ.

ಈ ಹಿಂದೆ ಇವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿ ಭರ್ಜರಿ ಮುಹೂರ್ತ ಆಚರಿಸಿಕೊಂಡ 'ಯಾರೇ ನೀ ಯಾಮಿನಿ' ಚಿತ್ರ ಮರುದಿನವೇ ಪ್ಯಾಕಪ್ ಆಯಿತು.

ಆದರೆ ಈ ಅದೇ ಚಿತ್ರದ ನಿರ್ದೇಶಕ ಜಾಲಿ ಬಾಸ್ಟಿನ್ ಮತ್ತೊಂದು ಹೊಸ ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರೆ. ಅಂದಹಾಗೆ ಈ ಚಿತ್ರಕ್ಕೂ ಪೂಜಾರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿಯಿದೆ. ನಾಯಕನಾಗಿ ವಿಶಾಲ್ ಹೆಗ್ಡೆ ಅಭಿನಯಿಸುತ್ತಿದ್ದಾರೆ.

ಈ ಬಾರಿ ನಿರ್ದೇಶಕರು ಯಾಮಿನಿಯನ್ನು ಸಂಪೂರ್ಣವಾಗಿ ಮನಸ್ಸಿನಿಂದ ಕಿತ್ತೊಗೆದು ಹೊಸ ಕಥೆಯೊಂದಿಗೆ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದ್ದಾರಂತೆ. ಯಾಮಿನಿಯ ಕಥೆ ಪುನರಾವರ್ತನೆಯಾಗದಿದ್ದರೂ ಅದರ ನಾಯಕಿಯಂತೂ ಪುನರಾವರ್ತನೆಯಾಗಿದ್ದಾಳೆ. ಚಿತ್ರದ ಉಳಿದ ಕೆಲಸಗಳೆಲ್ಲವೂ ಸದ್ದಿಲ್ಲದೆ ನಡೆಯುತ್ತಿದೆಯಂತೆ. ಈ ಬಾರಿ ಬೇಗ ಪ್ಯಾಕಪ್ ಆಗದಿರಲಿ ಎಂದು ಹಾರೈಸೋಣವೇ?
ಮತ್ತಷ್ಟು
ಏ.24ರಂದು ಜನ್ಮತಾಳಲಿರುವ 'ಜನ್ಮ'
ನಮ್ಮೆಜಮಾನ್ರಿಗೆ ಮುಹೂರ್ತ
ಪರಮೇಶ ಪಾನ್ವಾಲಾನಿಗೆ ಪುನೀತ್ ಕ್ಲಾಪ್
ಸದ್ಯವೇ ತೆರೆಗೇರಲಿರುವ ನಂದಾದೀಪ
ಸಿನಿಮಾ ನಟನೆಗಾಗಿ ಅಹ್ವಾನ
ಐಟಂಸಾಂಗ್‌ನಲ್ಲಿ ಅಂಬರೀಶ್