ಕನ್ನಡ ಚಿತ್ರರಂಗದಲ್ಲಿ 'ಚಂದ್ರ ಚಕೋರಿ' ಚಿತ್ರದ ಮೂಲಕ ಭರವಸೆ ಮೂಡಿಸಿದ ಮುರಳಿಯ ಚಿತ್ರ ನಂತರದ ದಿನಗಳಲ್ಲಿ ಹೆಚ್ಚಿನ ಯಶಸ್ಸು ಕಾಣಲಿಲ್ಲ. ಕಳೆದ ಎರಡು ವರ್ಷಗಳಿಂದ ಮುರಳಿ ಖಾಲಿ ಕುಳಿತ್ತಿದ್ದರು. ಈ ನಡುವೆ ಮುರಳಿ ನಿಶ್ವಿತಾರ್ಥ ದಿವ್ಯರೊಂದಿಗೆ ನಡೆದ ಸುದ್ದಿ ಎಲ್ಲರಿಗೂ ಗೊತ್ತಿದ್ದ ವಿಷಯವೇ ಬಿಡಿ. ಈಗ ಮತ್ತೊಂದು ಸುದ್ದಿ ಎಂದರೆ ಮುರಳಿಗೆ ಮದುವೆಯಂತೆ.
ನಗರದ ಅರಮನೆ ಮೈದಾನದಲ್ಲಿ ಮೇ 10 ರಂದು ಮುರಳಿ-ದಿವ್ಯರ ಮದುವೆಯನ್ನು ಮುರಳಿ ತಂದೆ ಅದ್ದೂರಿಯಾಗಿ ಮಾಡಲಿದ್ದಾರೆ. ಮರುದಿನ ನಡೆಯುವ ಅರತಕ್ಷತೆ ಕಾರ್ಯಕ್ರಮದಲ್ಲಿ ಚಿತ್ರರಂಗದ ಮಂದಿಯೆಲ್ಲ ಭಾಗವಹಿಸಲಿದ್ದಾರಂತೆ. ಎರಡು ವರ್ಷದಿಂದ ಖಾಲಿ ಕುಳಿತ್ತಿದ್ದ ಮುರಳಿಗೆ ಸದ್ಯ ಕೆಲವು ಅವಕಾಶಗಳು ಸಿಕ್ಕಿವೆ. ಅಣ್ಣ-ತಮ್ಮ ಒಟ್ಟಾಗಿ ಮಿಂಚಿನ ಓಟ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ನಂತರ ಮುರಳಿಗೆ ಶಿವಮಣಿ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ನಟಿಸುವ ಅವಕಾಶ ಸಿಕ್ಕಿದೆ. ಈ ನಡುವೆಯೇ ಮುರಳಿ ತಂದೆ ಚಿನ್ನೇಗೌಡರು ಮಗನ ಮದುವೆಗೆ ಮುಂದಾಗಿದ್ದಾರೆ. ಕಳೆದ ವರ್ಷವಷ್ಟೇ ಹಿರಿಯ ಮಗ ವಿಜಯ ರಾಘವೇಂದ್ರ ಅವರ ಮದುವೆ ಮುಗಿಸಿದ್ದರು.
ಮದುವೆ ನಂತರ ಮುರಳಿಗೆ ಅವಕಾಶಗಳು ಒಲಿಯುತ್ತದೋ ಎಂಬುದನ್ನು ಕಾದು ನೋಡಬೇಕಾಷ್ಟೇ.
|