ಪ್ರೊಫೆಸರ್ ಒಬ್ಬರು ತನ್ನ ವಿದ್ಯಾರ್ಥಿನಿಯಲ್ಲಿ 'ನನಗೆ ನೀನು ಅಂದ್ರೆ ತುಂಬಾ ಇಷ್ಟ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎನ್ನುತ್ತಾನೆ'. ಆಗ ವಿದ್ಯಾರ್ಥಿನಿ, 'ಮೊದಲು ಪ್ರೀತಿ ಎಂಬ ಪದದ ಅರ್ಥ ತಿಳಿದುಕೋ ಆ ನಂತರ ಪ್ರೀತಿಸಲು ಬಾ' ಎಂದು ಪ್ರೊಫೆಸರ್ ಪ್ರೀತಿಯನ್ನು ತಿರಸ್ಕರಿಸುವ ದೃಶ್ಯವನ್ನು ಇತ್ತೀಚೆಗೆ ಅನು ಚಿತ್ರಕ್ಕಾಗಿ ಬಾಲು ಹಾಗೂ ರಶ್ಮಿ ನಡುವೆ ಚಿತ್ರೀಕರಿಸಿಕೊಳ್ಳಲಾಯಿತು.
ತಮಿಳಿನ ಅನುಸೂಯ ಚಿತ್ರವನ್ನು ಇಲ್ಲಿ ಅನು ಎಂಬ ಹೆಸರಿನಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರದಲ್ಲಿ ಪೂಜಾಗಾಂಧಿ ಕ್ರೈಂ ವರದಿಗಾರ್ತಿಯ ಪಾತ್ರ ವಹಿಸಿದ್ದಾರೆ. ಇಲ್ಲಿ ನಡೆಯುವ ಕೊಲೆಯ ಜಾಡು ಹಿಡಿದು ಸಾಗುವ ದಿಟ್ಟ ವರದಿಗಾರ್ತಿಯಾಗಿ ಮಿಂಚಲಿದ್ದಾರೆ. ಇಲ್ಲಿ ವೈದ್ಯ ವಿದ್ಯಾರ್ಥಿನಿಯಾಗಿ ದುನಿಯಾದ ರಶ್ಮಿ ನಟಿಸುತ್ತಿದ್ದಾರೆ.
ಚಿತ್ರಕ್ಕೆ ರವಿಬಾಬು ಅವರು ಕಥೆ-ಚಿತ್ರಕಥೆ ಬರೆದಿದ್ದು, ಶಿವಗಣಪತಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರಂಜನಬಾಬು ಛಾಯಾಗ್ರಹಣ, ಗಜೇಂದ್ರ ಸಂಭಾಷಣೆ, ಇಸ್ಮಾಯಿಲ್ ಅವರ ಕಲಾನಿರ್ದೇಶನವನ್ನು ಈ ಚಿತ್ರಕ್ಕೆ ಬಳಸಲಾಗುತ್ತಿದೆ. ಚಿತ್ರದಲ್ಲಿ ಪೂಜಾಗಾಂಧಿ, ರಶ್ಮಿ, ನಾಗಕಿರಣ್, ಬಾಲು, ದತ್ತಣ್ಣ, ಸುಂದರ್ರಾಜ್, ಬಾಲರಾಜ್ ಹಾಗೂ ಸಂಗಮೇಶ ಉಪಾಸೆ ನಟಿಸುತ್ತಿದ್ದಾರೆ.
|