ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ-ಬಿರ್ಲಾರೊಂದಿಗೆ ಜೆನ್ನಿಫರ್
ಜೆನಿಫರ್ ಕೊತ್ವಾಲ್ ಎಂದರೆ ತಟ್ಟನೆ ನೆನಪಿಗೆ ಬರುವುದು ಆಕೆಯ ಚೂಟಿ ಚೂಟಿ ಹಾಗೂ ಬೋಲ್ಡ್ ಅಭಿನಯ. ಜೋಗಿ ಚಿತ್ರದಲ್ಲಿ ಈಕೆ ಎಲ್ಲೋ ಜೋಗಪ್ಪ ನಿನ್ನ... ಎಂದು ಕುಣಿದು ಎಲ್ಲರ ಮೆಚ್ಚುಗೆ ಪಡೆದಿದ್ದಳು. ನಂತರ ಈ ಬಾಂಬೆ ಹುಡುಗಿಗೆ ಕನ್ನಡದಲ್ಲಿ ಅನೇಕ ಅವಕಾಶಗಳು ಸಿಕ್ಕಿವೆ.

ಇತ್ತೀಚೆಗೆ ಈಕೆ ಟಾಟಾ ಬಿರ್ಲ ಚಿತ್ರದಲ್ಲಿ ಜಗ್ಗೇಶ್ ಹಾಗೂ ರವಿಚಂದ್ರನ್ ಜೊತೆ ಅಭಿನಯಿಸಿದ್ದಾರೆ. "ನಿಜಕ್ಕೂ ನನಗೆ ಖುಷಿಯಾಗುತ್ತಿದೆ. ಇಬ್ಬರು ಕನ್ನಡದ ಶ್ರೇಷ್ಠ ನಟರು ಅವರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ನಿಜಕ್ಕೂ ನನಗೆ ಸಂತಸ ತಂದಿದೆ. ಮೊದ ಮೊದಲು ಹೆದರುತ್ತಿದ್ದೆ" ಎನ್ನುತ್ತಾಳೆ ಈ ಚೆಲುವೆ.

ಚಿತ್ರದ ಸೆಟ್‌ನಲ್ಲಿ ಈಕೆಗೆ ನಗುವನ್ನೇ ಕಂಟ್ರೊಲ್ ಮಾಡೋದೆ ಒಂದು ದೊಡ್ಡ ಸಮಸ್ಯೆಯಾಗಿತ್ತಂತೆ. ಆ ರೀತಿಯ ಹಾಸ್ಯ ಸನ್ನಿವೇಶ ಸೃಷ್ಟಿಯಾಗಿತ್ತೆನ್ನುತ್ತಾರೆ ಜೆನ್ನಿಫರ್. ಚಿತ್ರತಂಡದ ಪ್ರತಿಯೊಬ್ಬರು ಸಂಪೂರ್ಣ ಸಹಕಾರ ನೀಡಿದ್ದಾರೆ. ಇದು ಕನ್ನಡದಲ್ಲಿ ಸೂಪರ್ಹಿಟ್ ಚಿತ್ರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಮಶಾಮಭಾಮ ಚಿತ್ರದಲ್ಲಿ ನಟಿಸಿದ ಊರ್ವಶಿ ಕೂಡಾ ಟಾಟಾ ಬಿರ್ಲಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ.
ಮತ್ತಷ್ಟು
ಪ್ರೊಫೆಸರ್ ಪ್ರೀತಿಯನ್ನು ಧಿಕ್ಕರಿಸುವ ಅನು
ನಟ ಮುರಳಿಯ ಮದ್ವೆಯಂತೆ
ಮನಬಿಚ್ಚಿಟ್ಟ ವಿಷ್ಣುವರ್ಧನ್
ಮತ್ತೆ ಒಂದಾದ ಪ್ರಜ್ವಲ್ - ಅಂದ್ರಿತಾ
ಶಿವಣ್ಣ-ಶಾರುಖ್ ಮುಲಾಕಾತ್...!!
ಪ್ರೇಮ್‌ರ ರಾಜ್‌ಗೆ ಮುಹೂರ್ತ