ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರ್ಮ್ ಕಳೆದುಕೊಳ್ಳದ ಅನಂತ್ ನಾಗ್
MOKSHA
ತನ್ನ ವಿಭಿನ್ನ ಅಭಿನಯಗಳ ಮೂಲಕ ಪಾತ್ರಗಳಿಗೆ ಜೀವತುಂಬುತ್ತಿದ್ದ ಅನಂತ ನಾಗ್‌ಗೆ ಇಂದು ಪೋಷಕ ನಟರಾಗಿಯೂ ಎಲ್ಲಿಲ್ಲದ ಬೇಡಿಕೆ.

ಅನಂತ್‌ನಾಗ್ ಅವರಿಗೆ ಬೇಡಿಕೆ ಹೆಚ್ಚುತ್ತಲೇ ಹೊಗುತ್ತಿದ್ದು, ಅತ್ತ ಅನಂತ್ ತಮ್ಮ ಸಂಭಾವನೆಯನ್ನೂ ಏರಿಸಿದ್ದಾರೆ ಎಂಬುದು ಸುದ್ದಿ. ಅವರು ತಮ್ಮ ಸಂಭಾವನೆಯನ್ನು ದಿನಕ್ಕೆ 1 ಲಕ್ಷಕ್ಕೆ ಏರಿಸಿದ್ದಾರೆ ಎಂದು ಹೇಳಲಾಗಿದೆ.

ಮುಂಗಾರು ಮಳೆ ಚಿತ್ರದಲ್ಲಿನ ಇವರ ಅಭಿನಯದ ನಂತರ ಅನಂತ್ ನಾಗ್ ಬೇಡಿಕೆ ಮತ್ತಷ್ಟು ಹೆಚ್ಚಿತು. ಆ ನಂತರ ಬಂದ ಹೆಚ್ಚಿನ ಚಿತ್ರಗಳಲ್ಲಿ ಅನಂತ್ ನಾಗ್ ಅವರನ್ನು ಒಂದು ದೃಶ್ಯದಲ್ಲಾದರೂ ಕರೆತರುವ ಪ್ರಯತ್ನವನ್ನು ಹೆಚ್ಚಿನ ನಿರ್ದೇಶಕರು ಮಾಡಿದರು.

ಕಿರುತೆರೆಯಲ್ಲಿ ಅನಂತ್ನಾಗ್ ಅವರ 'ಪ್ರೀತಿ ಇಲ್ಲದ ಮೇಲೆ' ಧಾರವಾಹಿಯಲ್ಲಿನ ಲೋಕಾಯುಕ್ತರ ಹಾಗೂ ಅವಿಭಕ್ತ ಕುಟುಂಬದಲ್ಲಿನ ಅಭಿನಯ ಎಲ್ಲರ ಮೆಚ್ಚುಗೆ ಪಡೆಯಿತು. ಮುಂಗಾರು ಮಳೆ ಚಿತ್ರದ ಅಭಿನಯದ ನಂತರ ಗಾಳಿಪಟದಲ್ಲೂ ಇವರು ನಟಿಸಿದರು. ಪಡೆದ ಸಂಭಾವನೆಗೆ ಎಲ್ಲಿಯೂ ಮೋಸವಾಗದಂತೆ ತಮ್ಮ ಅದ್ಭುತ ನಟನೆಯನ್ನು ಪ್ರದರ್ಶಿಸುತ್ತಾರೆ. ಏನೇ ಆದರೂ ಅನಂತ್ ನಾಗ್ ಬೇಡಿಕೆ ಹೆಚ್ಚುತ್ತಲೇ ಇದೆ.
ಮತ್ತಷ್ಟು
ರಾಜ್‌ಗೆ ನಾಯಕಿ ಎಲ್ಲವ್ಳೆ?
ಗಣೇಶ್ ತುಂಬಾ ಗ್ರೇಟ್ ಆಗ್ಬಿಟ್ರಿ ಕಣ್ರೀ...
ಕಾಫಿ ಡೇ ಅಲ್ಲ, ಪರಿಚಯ
ವಸುಂಧರೆಯಲ್ಲಿ ಮರಳಿ ಬಂದ ಸೃಜನ್
ಸಕತ್ ಕುಯ್ದಿದಾನೆ ಸಾರ್.....
ಶೈಲೇಂದ್ರಬಾಬು ಪುತ್ರನ ಆರಂಗೇಟ್ರಂ