ಮುರಳಿ ನಟಿಸುತ್ತಿರುವ 'ಶಿವಮಣಿ' ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತ-ಮುತ್ತ ಭರದಿಂದ ಸಾಗುತ್ತಿದೆ. ನಗರದ ಜಿಎಸ್ಎಸ್ ಕಾಲೇಜಿನಲ್ಲಿ ಐದು ದಿನ ಚಿತ್ರೀಕರಣ ಮುಗಿಸಿ, ಹೆಸರಘಟ್ಟ ಕಾರ್ಖಾನೆಯೊಂದರಲ್ಲಿ ಚಿತ್ರದ ಸಾಹಸ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದರು.
ರೌಡಿಗಳೊಂದಿಗೆ ಹೊಡೆದಾಡುತ್ತಿದ್ದ ನಾಯಕ ಮುರಳಿಗೆ ನಿರ್ದೇಶಕ ಅಮರ್ನಾಥ್ ಮಾರ್ಗದರ್ಶನ ನೀಡುತ್ತಿದ್ದರು. ಮೆಜೆಸ್ವಿಕ್ನಲ್ಲಿ ಮೂರು ದಿನ ಚಿತ್ರದ ಚಿತ್ರೀಕರಣ ಮಾಡಿದ್ದಾರೆ. ಮೆಜೆಸ್ವಿಕ್‌ನಲ್ಲಿ ಅಷ್ಟೊಂದು ಜನದಟ್ಟಣೆಯ ನಡುವೆ ಶೂಟಿಂಗ್ ಮಾಡುವುದು ಸುಲಭದ ಕೆಲಸವಲ್ಲ ಎಂದು ತಮ್ಮ ಶ್ರಮದ ಬಗ್ಗೆ ಹೇಳಿದರು ಅಮರ್‌ನಾಥ್.
ಚಿತ್ರ ನೋಡಿದವರು ಖಂಡಿತವಾಗಿಯೂ ಕಣ್ಣಲ್ಲಿ ನೀರು ತುಂಬಿಸಿಕೊಂಡೇ ಹೊರನಡೆಯುತ್ತಾರೆ. ಇಲ್ಲಿ ಅಪ್ಪ-ಮಗನ ಸೆಂಟಿಮೆಂಟ್ ಆ ರೀತಿ ಇದೆ. ಮುರಳಿ ಹಾಗೂ ರಮೇಶ್ ಭಟ್ ಅಭಿನಯ ಮನೋಜ್ಞವಾಗಿ ಮೂಡಿಬಂದಿದೆ ಎಂದು ನಿರ್ದೇಶಕರು ಹೇಳಿಕೊಂಡರು. ಇಲ್ಲಿ ಒಂದು ಮಣಿಯ ಪ್ರಭಾವದಿಂದ ನಾಯಕ ಕೆಲಸ ಮಾಡುತ್ತಾನೆ. ಅದು ಅದ್ಬುತ ಶಕ್ತಿಯ ಮಣಿ. ಆ ಮಣಿ ಇರುವವರೆಗೆ ನಾಯಕನಿಗೆ ಯಾವ ತೊಂದರೆಯೂ ಆಗುವುದಿಲ್ಲ. ಈ ಮಣಿಯ ಸುತ್ತಲೇ ಚಿತ್ರ ಸುತ್ತುತ್ತದೆ.
ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ನಟಿಸುತ್ತಿದ್ದು, ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಚಿತ್ರವನ್ನು ಜಗನ್ನಾಥ್ ಪೈ ನಿರ್ಮಿಸುತ್ತಿದ್ದಾರೆ.
|