ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಮೇಶ್ ಹುಟ್ಟುಹಬ್ಬಕ್ಕೆ ವಿಷ್ಣು ಸಂಭ್ರಮ
MokshendraMOKSHA
ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳ ಹುಟ್ಟುಹಬ್ಬ ಎಲ್ಲರಿಗೂ ನೆನಪಿರುತ್ತದೆ. ಇದರ ಬಗ್ಗೆ ಯಾರೂ ನೆನಪು ಮಾಡುವ ಅಗತ್ಯವಿಲ್ಲ. ಮಧ್ಯರಾತ್ರಿ ಅವರ ಮನೆಯ ಮುಂದೆ ಅಭಿಮಾನಿಗಳು ಕ್ಯೂ ನಿಂತು ಕೇಕ್ ಕಟ್ ಮಾಡಿ ಶುಭ ಹಾರೈಸುತ್ತಾರೆ. ಅದೇ ಒಬ್ಬ ಸಾಮಾನ್ಯ ಪೋಷಕ ನಟ ಅಥವಾ ಹಿರಿಯ ನಟನೊಬ್ಬನ ಹುಟ್ಟುಹಬ್ಬ ಎಂದರೆ ಯಾವ ಪ್ರೇಕ್ಷಕರಿಗೂ ಗೊತ್ತಿರುವುದಿಲ್ಲ. ಇಂದಿನ ಮಾಧ್ಯಮಗಳು ಕೂಡಾ ಅಷ್ಟೇ ಸ್ವಾರ್‌ಗಳ ಹುಟ್ಟುಹಬ್ಬವಾದರೆ ಭರ್ಜರಿ ಪ್ರಚಾರ ನೀಡುತ್ತವೆ.

ಇತ್ತೀಚೆಗೆ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಎಂ.ಎಸ್. ಉಮೇಶ್ ಅವರು 63ನೇ ವರ್ಷಕ್ಕೆ ಕಾಲಿಟ್ಟರು. ಆದರೆ ಪ್ರೇಕ್ಷಕರ್ಯಾರಿಗೂ ಈ ವಿಷಯ ಗೊತ್ತಿರಲಿಲ್ಲ. ನಮ್ಮೆಜಮಾನ್ರು ಚಿತ್ರದ ಶೂಟಿಂಗ್‌ನಲ್ಲಿದ್ದ ವಿಷ್ಣುವರ್ಧನ್‌ಗೆ ಉಮೇಶ್ ಅವರ ಹುಟ್ಟುಹಬ್ಬದ ವಿಷಯ ತಿಳಿದು ತಕ್ಷಣ ಕೇಕ್ ತರಿಸಿ ಉಮೇಶ್ ಅವರಿಂದ ಕತ್ತರಿಸಿ ಅವರ ಹುಟ್ಟುಹಬ್ಬ ಆಚರಿಸಿಕೊಂಡರಂತೆ. ಜೊತೆಗೆ ನಿರ್ದೇಶಕ ನಾಗಾಭರಣ ಕೂಡಾ ಇದ್ದರು.

ಇದು ವಿಷ್ಣುವರ್ಧನ್ ಅವರ ದೊಡ್ಡ ಗುಣ. ಎಷ್ಟು ದೊಡ್ಡ ಸ್ಟಾರ್ ಆದರೂ ತನ್ನ ಉದ್ಯಮದ ಸ್ನೇಹಿತರನ್ನು ಮರೆಯದೇ ಅವರ ಭಾವನೆ ಹಾಗೂ ಇತರ ಅಂಶಗಳನ್ನು ಗುರುತಿಸಿ ಗೌರವಿಸುವುದು ವಿಷ್ಣು ಅವರ ಸಂಸ್ಕಾರಕ್ಕೆ ಸಾಕ್ಷಿ. ಆದರೆ ಇಂದಿನ ಕೆಲ ನಟರು ಇಂತಹ ಗುಣಗಳಿಂದ ತೀರಾ ದೂರವಿದ್ದಾರೆ. ಕೇವಲ ನಟನೆಯಲ್ಲಿ ಮಾನವೀಯತೆ, ಸೌಜನ್ಯ ತೋರಿಸಿದರೆ ಸಾಲದು. ನಿಜ ಜೀವನದಲ್ಲೂ ಅದನ್ನು ರೂಢಿಸಬೇಕು. ಅದನ್ನು ನಮ್ಮ ವಿಷ್ಣು ರೂಢಿಸಿಕೊಂಡಿದ್ದಾರೆ.
ಮತ್ತಷ್ಟು
ಸೋನುವಿನ ಸಂಭಾವನೆ ಎಷ್ಟು ಗೊತ್ತಾ?
ಬಿಡುಗಡೆಗೆ ಕಾದಿರುವ ಮೂರು ಚಿತ್ರಗಳು
ಪುನಿತ್-ಯೋಗರಾಜ್ ಯೋಗಾಯೋಗ?
ಶಿವಮಣಿಯಲ್ಲಿ ಅಪ್ಪ-ಮಗನ ಸೆಂಟಿಮೆಂಟ್
ಫಾರ್ಮ್ ಕಳೆದುಕೊಳ್ಳದ ಅನಂತ್ ನಾಗ್
ರಾಜ್‌ಗೆ ನಾಯಕಿ ಎಲ್ಲವ್ಳೆ?