ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಕನ್ನಡ ಚಿತ್ರರಂಗದಲ್ಲಿ ಈಗ ಎಲ್ಲವೂ ಹೊಸ ಪ್ರಯೋಗ. ಹಾಡಿನಿಂದ ಬಂದು ಹೆಸರಿನವರೆಗೂ. ಹಿಟ್ ಚಿತ್ರದ ಹಾಡುಗಳ ಸಾಲನ್ನೇ ಟೈಟಲ್ ಆಗಿ ಇಟ್ಟು ಈಗ ಕೆಲವು ಚಿತ್ರಗಳು ಬರುತ್ತಿವೆ. ಮುಂಗಾರು ಮಳೆಯ ಹಾಡಿನ “ಹಾಗೇ ಸುಮ್ಮನೆ’, ಮಿಲನದ ‘ಅಂತೂ ಇಂತೂ ಪ್ರೀತಿ ಬಂತು’ ಚಿತ್ರಗಳು ಬರುತ್ತಿವೆ. ಹೀಗೆ ಹಾಡಿನ ಸಾಲನ್ನೇ ಹೆಸರನ್ನಾಗಿಸಿ ಬರುತ್ತಿರುವ ಮತ್ತೊಂದು ಚಿತ್ರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’.

ಇತ್ತೀಚೆಗೆ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನು ಡಾ.ರಾಜ್ ಹಾಡಿ ಜನಪ್ರಿಯವಾಗಿತ್ತು. ಈ ಹಾಡಿನ ಸಾಲನ್ನೇ ಚಿತ್ರಕ್ಕೆ ಹೆಸರಾಗಿಟ್ಟರೆ ತಮ್ಮ ಘನತೆ ಹೆಚ್ಚುವುದರೊಂದಿಗೆ ಒಂದು ಒಳ್ಳೆಯ ಸಿನಿಮಾ ನೀಡಿದಂತಾಗುತ್ತದೆ ಎಂದು ನಿರ್ಮಾಪಕ ವಿಶ್ವನಾಥ್ ರೆಡ್ಡಿ ಹಣ ಹಾಕಿದ್ದಾರೆ ಎಂದರು ನಿರ್ದೇಶಕ ಮಹದೇವ್.

ಈ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಲಾಗಿದೆ. ಚಿತ್ರದಲ್ಲಿ ‘ಮುಟ್ಟು ಬಾ’ ಹಾಗೂ ‘ಮನೆಹಾಳ ಮಲೆಯಾಳಿ’ ಎಂಬ ಪದಗಳಿರುವುದರಿಂದ ಸೆನ್ಸಾರ್ ಮಂಡಳಿ ಇದಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಲು ಮುಂದಾಗಿತ್ತು. ಕೊನೆಗೆ ಇದರಲ್ಲಿನ ಮನೆಹಾಳ ಎಂಬ ಪದವನ್ನು ತೆಗೆದ ನಂತರ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಲಾಗಿದೆ. ಇದು ಆಶ್ಲೀಲ ಚಿತ್ರ ಅಲ್ಲ. ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡುವಂತಹ ಚಿತ್ರ ಎಂದರು ವಿಶ್ವನಾಥ್ ರೆಡ್ಡಿ.
ಮತ್ತಷ್ಟು
ಮಂಜಿನ ಹನಿ ತಿದ್ದುತ್ತಿರುವ ರವೀ
ಸಿದ್ಧವಾದ ಚಲನಚಿತ್ರಗಳಿಗೆ ಚುನಾವಣಾ ಗ್ರಹಣ!
ಉಮೇಶ್ ಹುಟ್ಟುಹಬ್ಬಕ್ಕೆ ವಿಷ್ಣು ಸಂಭ್ರಮ
ಸೋನುವಿನ ಸಂಭಾವನೆ ಎಷ್ಟು ಗೊತ್ತಾ?
ಬಿಡುಗಡೆಗೆ ಕಾದಿರುವ ಮೂರು ಚಿತ್ರಗಳು
ಪುನಿತ್-ಯೋಗರಾಜ್ ಯೋಗಾಯೋಗ?