ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಗನನ್ನೇ ನಾಯಕನನ್ನಾಗಿಸಿದ ನಾರಾಯಣ
ಮೊದಲ ಚಿತ್ರದಲ್ಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿ ಅವರ ಕನಸಿನ ಕನ್ಯೆಯಾದ ನಾಯಕಿ ಯಾರು? ಸ್ವಲ್ಪ ಆಲೋಚಿಸಿದರೆ ಉತ್ತರ ಸುಲಭ. ಹೋಗ್ಲಿ ಬಿಡಿ, ಇನ್ಯಾರು ನಮ್ಮ ಅಮೂಲ್ಯ. ಇನ್ನೂ ಒಂಬತ್ತನೇ ಕ್ಲಾಸ್ ಮುಗಿಸುವ ಮುನ್ನವೇ ಈ ಬಾಲೆಯನ್ನು ಕರೆತಂದು ಚೆಲುವಿನ ಚಿತ್ತಾರ ಎಂಬ ಚಿತ್ರವನ್ನು ನೀಡಿ ಎಸ್.ನಾರಾಯಣ್ ಒಂದಷ್ಟು ಬಾಚಿಕೊಂಡರು.

ಈಗ ಎಸ್.ನಾರಾಯಣ್ ಮತ್ತೊಂದಿಷ್ಟು ಬಾಚಿಕೊಳ್ಳಲು ಬಂದಿದ್ದಾರೆ. ಈ ಬಾರಿ ಅದೇ ತಮ್ಮ ಹಿಂದಿನ ಚಿತ್ರದ ಯಶಸ್ಸಿನ ಗುಟ್ಟು ಅಮೂಲ್ಯಳನ್ನೇ ಕರೆತಂದಿದ್ದಾರೆ. ಹೌದು, ಎಸ್. ನಾರಾಯಣ್ ಅವರ "ಚೈತ್ರದ ಚಂದ್ರಮ" ಚಿತ್ರದಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಮೂಲ್ಯ ಮತ್ತೆ ನಾಯಕಿಯಾದ ಸುದ್ದಿ ಇಡೀ ಗಾಂಧಿನಗರದಲ್ಲಿ ಹಬ್ಬಿತ್ತು. ಆದರೆ ನಾಯಕನ್ಯಾರು ಎಂಬ ಕುತೂಹಲವೂ ಅಷ್ಟೇ ದಟ್ಟವಾಗಿ ಬೆಳೆದಿತ್ತು.

ಆದರೆ ಎಸ್.ನಾರಾಯಣ್ ಎಷ್ಟಾದರೂ ಬುದ್ದಿವಂತರು. ಈ ಬಾರಿ ಅಮೂಲ್ಯಗೆ ನಾಯಕನನ್ನಾಗಿ ತಮ್ಮ ಮಗನನ್ನೇ ಆಯ್ಕೆ ಮಾಡಿದ್ದಾರೆ. ಚಿತ್ರೀಕರಣ ಈಗಾಗಲೇ ಸಾಗುತ್ತಿದೆ. ಕಳೆದ ಬಾರಿ ಅಮೂಲ್ಯ ಹೊಸ ನಟಿ. ಹೊಸ ನಟಿಯ ಚಿತ್ರ ಓಡುತ್ತದೋ ಇಲ್ಲವೋ ಎಂಬ ಸಂಶಯದಿಂದ ಗೋಲ್ಡನ್‌ ಸ್ಟಾರ್ ಗಣೇಶ್‌ನನ್ನು ನಾಯಕನನ್ನಾಗಿಸಿ ಗೆದ್ದಿದ್ದರು ನಾರಾಯಣ್. ಅವರ ಮಗ ಎಷ್ಟಾದರೂ ಹೊಸ ನಟ ಎಂಬ ಅರಿವು ನಾರಾಯಣ್‌ಗೆ ಇರುವುದರಿಂದ ಯಾಕೆ ರಿಸ್ಕು ಅಂತ ಹೇಳಿ ಈಗಾಗಲೇ ಎಲ್ಲರ ಮನಸೂರೆಗೊಂಡಿರುವ ಅಮೂಲ್ಯಳನ್ನು ಆಯ್ಕೆ ಮಾಡಿದ್ದಾರೆ. ಹೇಗಿದೆ ನಾರಾಯಣ್ ತಲೆ? ಅಂದಹಾಗೆ ಇಲ್ಲಿ ವಿಲನ್ ಪಾತ್ರದಲ್ಲಿ ಮೆಜೆಸ್ಟಿಕ್, ಗೂಳಿ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ ಪಿ.ಎನ್.ಸತ್ಯಾ ಅವರು ನಟಿಸುವುದು ಬಹುತೇಕ ಖಚಿತವಾಗಿದೆ.
ಮತ್ತಷ್ಟು
ಬಿರುಗಾಳಿಯಲ್ಲಿ ಚೇತನ್ ಹೊಡೆದಾಟ
ಜಂಗ್ಲಿಯಲ್ಲಿ ಮತ್ತೆ ಒಂದಾದ ವಿಜಯ್ ಸೂರಿ
ಮತದಾನದ ಮೌಲ್ಯ ತಿಳಿಯಬೇಕಿದ್ದರೆ ನಿಷೇಧಾಜ್ಞೆ ನೋಡಬೇಕಂತೆ
ಬೇಡವೆಂದರೂ ವಕೀಲರ ಬೆನ್ನು ಬೀಳುವ ಹುಡುಗಿ
ಕಾಂಬೋಡಿಯಾದಿಂದ ಮಂಗಳೂರಿಗೆ ಬಂದ ಕಾಳಿದಾಸ
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು