ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೈಕೋ ಎಂಬ ವಿಚಿತ್ರ ಚಿತ್ರ
ಕನ್ನಡ ಚಿತ್ರರಂಗದಲ್ಲಿ ದಿನಾಲೂ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಹೆಸರು, ಸಾಂಗ್ ಹೀಗೇ ಬೇರೆ ಬೇರೆ ವಿಷಯಗಳಲ್ಲಿ ವಿಶಿಷ್ಟ ಪ್ರಯೋಗ ನಡೆಯುತ್ತಿರುವುದು ಇತ್ತೀಚೆಗೆ ಸಾಮಾನ್ಯ. ಆದರೆ ಕೊನೆವರೆಗೂ ಚಿತ್ರದ ನಾಯಕ-ನಾಯಕಿಯರನ್ನು ತೋರಿಸದೇ ಸಸ್ಪೆನ್ಸ್ ಇಡುವುದು ಹೊಸತು. ಸೈಕೋ ಚಿತ್ರದ ನಿರ್ದೇಶಕ ದೇವದತ್ತ ಇದನ್ನು ಮಾಡಿದ್ದಾರೆ.

ತಮ್ಮ ಚಿತ್ರದ ನಾಯಕ-ನಾಯಕಿ ಯಾರೆಂಬುದನ್ನು ನಿರ್ದೇಶಕರು ಇಲ್ಲಿಯವರೆಗೂ ತೋರಿಸಿಲ್ಲ. ಇತ್ತೀಚೆಗೆ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವಿತ್ತು. ಅಲ್ಲೂ ಕೂಡಾ ನಾಯಕ-ನಾಯಕಿ ಯಾರೆಂಬ ಬಗ್ಗೆ ಮಾಹಿತಿ ನೀಡಲಿಲ್ಲ. ಪತ್ರಕರ್ತರು ಈ ಬಗ್ಗೆ ನಿರ್ದೇಶಕರನ್ನು ಪ್ರಶ್ನಿಸಿದರೆ ಸಾರಿ, ಇದು ಸಸ್ಪೆನ್ಸ್ ಎಂದರು. ಚಿತ್ರದ ವಾಲ್‌ಪೋಸ್ಟರ್‌ಗಳಲ್ಲಿ ಸಾಮಾನ್ಯವಾಗಿ ನಾಯಕ-ನಾಯಕಿಯರ ಮುಖಗಳು ರಾರಾಜಿಸುತ್ತಿವೆ. ಆದರೆ ಇಲ್ಲಿ ಯಾವುದೇ ಅಂತಹ ಮುಖಗಳು ಕಾಣುತ್ತಿಲ್ಲ. ಬದಲಾಗಿ ಬರೀ ಸೈಕೋ ಎಂದು ಬರೆದ ವಿಶಿಷ್ಟ ರೀತಿಯ ಪೋಸ್ಟರ್ ರಾರಾಜಿಸುತ್ತಿದೆ.

ಧ್ವನಿ ಬಿಡುಗಡೆ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಬಾಲಿವುಡ್ ಓಂ ಶಾಂತಿ ಓಂ ಖ್ಯಾತಿಯ ಸಂಗೀತ ನಿರ್ದೇಶಕ ಶೇಖರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಘು ದೀಕ್ಷಿತ್ ಹಾಗೂ ಶೇಖರ್ ಸ್ನೇಹಿತರಂತೆ. ರಘು ದೀಕ್ಷಿತ್ ಅವರ ಹಾಡುಗಳು ಬಾಲಿವುಡ್‌ನಲ್ಲೂ ಜನಪ್ರಿಯವಾಗಿದೆ. ಇವರ ಹಾಡುಗಳನ್ನು ಅಮಿತಾಬ್ ಹಾಗೂ ಅಭಿಷೇಕ್ ಬಚ್ಚನ್ ಕೂಡಾ ಮೆಚ್ಚಿದ್ದಾರೆ ಎಂದು ಶೇಖರ್ ರಘು ಗುಣಗಾನ ಮಾಡಿದರು.
ಮತ್ತಷ್ಟು
ತಬ್ಬಲಿಯು ನೀನಾದೆ ಮಗನೇ
ರಮೇಶ್ ನಿರ್ದೇಶನದಲ್ಲಿ ಮತ್ತೊಂದು ಚಿತ್ರ
ಕರಾವಳಿ ಕಿನಾರೆಯಲ್ಲಿ ಪ್ರಿಯಾ
ಬೇಡಿಕೆಯಲ್ಲಿರುವ ನಟಿ ರಶ್ಮಿ
ಹಾಸ್ಯ ಪ್ರಧಾನ ಚಿತ್ರವಾಗಿ ಕಾಮಣ್ಣನ ಮಕ್ಕಳು
ಬಾಂಬೆಯಿಂದ ಬಂದ ಸ್ಲಂ ಬಾಲಾ