ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣೇಶ್ ತಮ್ಮ ಮಹೇಶ್ ಚಿತ್ರರಂಗಕ್ಕೆ
ಅಣ್ಣ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಈಗ ತಮ್ಮನ ಸರದಿ. ಜೂನ್ ತಿಂಗಳಲ್ಲಿ ಬಣ್ಣ ಹಚ್ಚುವ ಮೂಲಕ ಮೊದಲ ಬಾರಿಗೆ ತಮ್ಮನೂ ಚಿತ್ರಲೋಕ
MOKSHA
ಪ್ರವೇಶಿಸಲಿದ್ದಾರೆ. ಹೌದು ಯಾರು ಅಣ್ಣ, ಯಾರು ತಮ್ಮ ಎಂಬ ಕುತೂಹಲವೇ? ಇನ್ಯಾರು ನಮ್ಮ ಗೋಲ್ಡನ್‌ಸ್ಟಾರ್ ಗಣೇಶ್ ತಮ್ಮ ಮಹೇಶ್ ಸದ್ಯವೇ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸಲಿದ್ದಾರೆ.


ಚಿತ್ರವನ್ನು ವಿನಯ್ ಎಂಬ ಉದ್ಯಮಿಯೊಬ್ಬರು ನಿರ್ಮಿಸುತ್ತಿದ್ದು, ಈ ವರೆಗೆ ಸ್ಟಿಲ್ ಫೋಟೋಗ್ರಾಫರ್ ಆಗಿದ್ದ ವೇಲು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಗಣೇಶ್ ತಮ್ಮ ಮಹೇಶ್ ಎಂಟಿಆರ್ ಫುಡ್ ಹಂಚಿಕೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಯಶವಂತಪುರದಲ್ಲಿ ಅಂಗಡಿಯೂ ಇದೆ. ಈಗ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಚಿತ್ರಕ್ಕೆ ನಾಯಕಿ ಯಾರು ಎಂದು ಇನ್ನೂ ಫೈನಲ್ ಆಗಿಲ್ಲ.

ನಿರ್ದೇಶಕರಾಗುತ್ತಿರುವ ವೇಲು ತಮ್ಮ ಚಿತ್ರಕ್ಕೆ ಕೆಲವು ತಾಂತ್ರಿಕ ವರ್ಗವನ್ನು ಈಗಲೇ ಆಯ್ಕೆ ಮಾಡಿದ್ದಾರೆ. ಸುರೇಶ್ ಕ್ಯಾಮರಾ ಹಾಗೂ ಶಂಕರ್ ಸಂಗೀತ ನೀಡಲಿದ್ದಾರೆ. ಇದೊಂದು ಕಮರ್ಷಿಯಲ್ ಟಚ್ ಇರುವ ಸಾಮಾನ್ಯ ಪ್ರೇಮ ಕಥೆ. ಅಧಿಕೃತ ಮಾಹಿತಿಯನ್ನು ಸದ್ಯದಲ್ಲೇ ನೀಡುತ್ತೇನೆ ಎನ್ನುತ್ತಾರೆ ವೇಲು. ಕೆಲ ಸಮಯಗಳಿಂದ ಮಹೇಶ್, ಅಣ್ಣನ ಜೊತೆ ಚಿತ್ರರಂಗದ ಕಾರ್ಯಕ್ರಮಗಳಿಗೆ ಬರುತ್ತಿದ್ದರು. ಈಗ ನಾಯಕರಾಗಲು ಸಿದ್ಧರಾಗಿದ್ದಾರೆ.

ಮನೆಯಲ್ಲಿ ಒಬ್ಬ ಬಣ್ಣ ಹಚ್ಚಿ ಮಿಂಚಿದರೆ ನಂತರ ಚಿತ್ರರಂಗಕ್ಕೆ ಇಡೀ ಕುಟುಂಬವೇ ಬರುತ್ತದೆ. ಇಲ್ಲೂ ಕೂಡಾ ಅದೇ ರೀತಿ ಆಗುತ್ತಿದೆ. ಗಣೇಶ್ ಅವರ ಕೊನೆಯ ತಮ್ಮ ನಿಜಲಿಂಗಪ್ಪ ಕಾಲೇಜಿನಲ್ಲಿ ಓದುತ್ತಿದ್ದಾರೆ. ಮಹೇಶ್ ಚಿತ್ರರಂಗದಲ್ಲಿ ಗಣೇಶ್ ತರಹ ಮಿಂಚುತ್ತಾರೋ ಎಂದು ಕಾದು ನೋಡಬೇಕು.
ಮತ್ತಷ್ಟು
ಹೃದಯದ ನೋವ ತೋಡಿಕೊಂಡ ಹೃದಯಶಿವ
ಗಾಳಿಪಟದಂತೆ ಏರಿದ ರೆಸಾರ್ಟ್ ಬಾಡಿಗೆ
ಹಾಗೇ ಸುಮ್ಮನೆ....
ಸೈಕೋ ಎಂಬ ವಿಚಿತ್ರ ಚಿತ್ರ
ತಬ್ಬಲಿಯು ನೀನಾದೆ ಮಗನೇ
ರಮೇಶ್ ನಿರ್ದೇಶನದಲ್ಲಿ ಮತ್ತೊಂದು ಚಿತ್ರ