ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೋಲಿ, ರಾಜ್ ಆದ ಕಥೆ ಗೊತ್ತಾ?
MOKSHA
ನ್ನಡ ಚಿತ್ರರಂಗದಲ್ಲಿ ಕೆಲವೇ ಚಿತ್ರಗಳನ್ನು ನಿರ್ಮಿಸಿ ಕ್ರಿಯೇಟಿವ್ ನಿರ್ದೇಶಕ ಎಂದು ಹಸೆರು ಗಳಿಸಿದ ಪ್ರೇಮ್ ಚಿತ್ರಕ್ಕೆ ಹೆಸರು ಇಡುವಲ್ಲಿಯೂ ನಿಸ್ಸಿಮರು. ಈ ಹಿಂದೆ ಇವರು ಕರಿಯಾ, ಎಸ್ಕ್ಯೂಸ್ ಮೀ, ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ... ಹೀಗೆ ವಿಶಿಷ್ಟ ರೀತಿಯ ಟೈಟಲ್‌ಗಳನ್ನು ಇಟ್ಟಿದ್ದಾರೆ. ಅದೇ ಗುಂಗಿನಲ್ಲಿ ಇವರು ತಮ್ಮ ನಿರ್ದೇಶನದ ಚಿತ್ರಕ್ಕೆ 'ಪೋಲಿ' ಎಂದು ಹೆಸರಿಟ್ಟರು.

ಆ ಚಿತ್ರ ಬೇರಾವುದು ಅಲ್ಲ. ಈಗ 'ರಾಜ್ ದಿ ಶೋಮ್ಯಾನ್' ಎಂಬ ಹೆಸರಿನಲ್ಲಿ ಮುಹೂರ್ತ ಕಂಡ ಚಿತ್ರ. ಹಿಂದೆ ಈ ಚಿತ್ರಕ್ಕೆ ಆಲೋಚನೆ ಮಾಡಿ, ಮಾಡಿ ಕೊನೆಗೆ 'ಪೋಲಿ' ಎಂದು ಹೆಸರಿಟ್ಟರಂತೆ. ಆದರೆ ಪಾರ್ವತಮ್ಮ ರಾಜ್ ಕುಮಾರ್ "ಏನೋ ಪ್ರೇಮ್ ಈ ತರಹ ಹೆಸರಿಟ್ಟಿದ್ದೀಯಾ. ಈ ಹೆಸರ್ಯಾಕೋ ನಂಗೆ ಸರಿ ಕಾಣ್ತಿಲ್ಲ. ಬೇರೆ ಇಡು. ಹೆಣ್ಣುಮಕ್ಕಳು ಚಿತ್ರಕ್ಕೆ ಹೋಗುವಾಗ ಯಾವ ಚಿತ್ರಕ್ಕೆಂದು ಕೇಳಿದರೆ ಅವರು ಪೋಲಿಗೆ ಎನ್ನಲು ಸರಿಯಾಗಲ್ಲ" ಎಂದರಂತೆ.

ಇದೇ ಗುಂಗಿನಲ್ಲಿ ಪ್ರೇಮ್ ತಲೆಕೆಡಿಸಿಕೊಂಡು ಏನೇನೋ ಗೀಚುತ್ತಿದ್ದಾಗ ಹಠತ್ತಾಗಿ 'ರಾಜ್' ಎಂದು ಗೀಚಿ ಹೋಯಿತಂತೆ. ಯಾಕೋ ಅವರಿಗೆ ಅದು ಇಷ್ಟವಾಯಿತು. ತಟ್ಟನೆ ಅದಕ್ಕೆ 'ದಿ ಶೋಮ್ಯಾನ್' ಎಂದು ಸೇರಿಸಿ ಪೋಲಿ ಬದಲು 'ರಾಜ್ ದಿ ಶೋಮ್ಯಾನ್' ಎಂಬ ಹೆಸರಿಟ್ಟು ಪಾರ್ವತಮ್ಮ ಅವರಿಗೆ ಹೇಳಿದರಂತೆ. ಅವರಿಗೂ ಈ ಹೆಸರು ಇಷ್ಟವಾಗಿ ಇದೇ ಇರಲಿ ಎಂದು ಪ್ರೇಮ್ಗೆ ಹೇಳಿದರು. "ಇನ್ನು ಮುಂದೆ ಚಿತ್ರಕ್ಕೆ ಹೆಸರಿಡುವಾಗ ತುಂಬಾ ಕ್ಯಾರ್ಫುಲ್ ಆಗಿರ್ಬೇಕು ಬಾಸ್" ಅನ್ನುತ್ತಾರೆ ಪ್ರೇಮ್.
ಮತ್ತಷ್ಟು
ಗಣೇಶ್ ತಮ್ಮ ಮಹೇಶ್ ಚಿತ್ರರಂಗಕ್ಕೆ
ಹೃದಯದ ನೋವ ತೋಡಿಕೊಂಡ ಹೃದಯಶಿವ
ಗಾಳಿಪಟದಂತೆ ಏರಿದ ರೆಸಾರ್ಟ್ ಬಾಡಿಗೆ
ಹಾಗೇ ಸುಮ್ಮನೆ....
ಸೈಕೋ ಎಂಬ ವಿಚಿತ್ರ ಚಿತ್ರ
ತಬ್ಬಲಿಯು ನೀನಾದೆ ಮಗನೇ