ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರೇಮ್‌ಗೆ ಗೆಲುವು ಬೇಕಿದೆ
ನೆನಪಿರಲಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾದ ಲವ್‌ಲಿ ಸ್ಟಾರ್ ಪ್ರೇಮ್‌ಗೆ ನಂತರ ದಿನಗಳು ಅಷ್ಟೇನೂ ಹಿತಕರವಾಗಲಿಲ್ಲ. ಅವಕಾಶಕ್ಕಾಗಿ ಪ್ರೇಮ್ ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಂಡರು. ಇವರ ಜೊತೆ ಜೊತೆಯಲ್ಲಿ ಚಿತ್ರವೊಂದು ಬಿಟ್ಟು ಬೇರೆ ಚಿತ್ರಗಳೆಲ್ಲವೂ ಗೋತಾ ಹೊಡೆದವು.

ಈಗ ಪ್ರೇಮ್ ಮತ್ತೊಂದು ಯಶಸ್ಸಿಗಾಗಿ ಎದುರು ನೋಡುತ್ತಿದ್ದಾರೆ. ಸದ್ಯ ಪ್ರೇಮ್ ಅಶೋಕ್ ಕಶ್ಯಪ್ ಅವರ ನಿರ್ದೇಶನದಲ್ಲಿ ಸಿಹಿಮುತ್ತು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರ ಗೆದ್ದರೂ ಇದರ ಯಶಸ್ಸು ಪ್ರೇಮ್ಗೊಬ್ಬರಿಗೆ ಸಲ್ಲುವುದಿಲ್ಲ. ಯಾಕೆಂದರೆ ಈ ಚಿತ್ರ ನಾಯಕಿ ಪ್ರಧಾನ ಚಿತ್ರ. ಅಲ್ಲದೇ ಇಲ್ಲಿ ಐವರು ನಾಯಕರು. ಈ ಹಿಂದೆ ಪ್ರೇಮ್ ನಟಿಸಿದ ಪಲ್ಲಕ್ಕಿ, ಗುಣವಂತ, ಹೊಂಗನಸು ಚಿತ್ರಗಳು ಮಕಾಡೆ ಮಲಗಿದ್ದವು.

ಪ್ರೇಮ್ ಒಂದೊಮ್ಮೆ ಘಂಟಾಘೋಷವಾಗಿ ರೀಮೇಕ್ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಸದ್ಯ ಪ್ರೇಮ್ ಪದೇ ಪದೇ ಹೈದರಾಬಾದಿಗೆ ಓಡಾಡುತ್ತಿದ್ದಾರೆ. ಅಲ್ಲಿ ಚಿತ್ರವೊಂದರ ಸ್ಕ್ತ್ರೀನ್ ಟೆಸ್ಟ್‌ಗೆ ಸಿದ್ಧವಾಗುತ್ತಿದ್ದಾರೆ. ಇಲ್ಲಿ ತನ್ನ ಚಿತ್ರಗಳು ಸಾಲು ಸಾಲು ಅಂಗಾತ ಮಲಗುತ್ತಿರುವುದರಿಂದ ಅನಿವಾರ್ಯವಾಗಿ ಅಲ್ಲಿನ ಚಿತ್ರಗಳನ್ನು ಪ್ರೇಮ್ ಒಪ್ಪಿಕೊಳ್ಳುವ ಸ್ಥಿತಿ ಎದುರಾಗಿರಬಹುದು.

ಈಗ ಪ್ರೇಮ್‌ಗೆ ಕನ್ನಡದಲ್ಲಿ ಯಶಸ್ಸು ಬೇಕಾಗಿದೆ. ಆದರೆ ಅದು ಯಾವ ಚಿತ್ರದ ಮೂಲಕ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು.
ಮತ್ತಷ್ಟು
ಹೈದರಾಬಾದಿಗೋಡಿದ ನನ್ನವನು
ಪೋಲಿ, ರಾಜ್ ಆದ ಕಥೆ ಗೊತ್ತಾ?
ಗಣೇಶ್ ತಮ್ಮ ಮಹೇಶ್ ಚಿತ್ರರಂಗಕ್ಕೆ
ಹೃದಯದ ನೋವ ತೋಡಿಕೊಂಡ ಹೃದಯಶಿವ
ಗಾಳಿಪಟದಂತೆ ಏರಿದ ರೆಸಾರ್ಟ್ ಬಾಡಿಗೆ
ಹಾಗೇ ಸುಮ್ಮನೆ....