ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲಿನಲ್ಲಿ ಮುಸ್ಸಂಜೆ ಮಾತು
ಕಿಚ್ಚ ಸುದೀಪ್ ಹಾಗೂ ರಮ್ಯಾ ಮತ್ತೊಮ್ಮೆ ಜೊತೆಯಾಗಿ ನಟಿಸಿರುವ ಮುಸ್ಸಂಜೆ ಮಾತು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರವನ್ನು ಮಹೇಶ್ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕೆ ಹಾಡಿನ ದೃಶ್ಯವೊಂದನ್ನು ರೈಲಿನಲ್ಲಿ ಚಿತ್ರೀಕರಿಸಲಾಯಿತು. ಆ ಒಂದು ಹಾಡಿಗೆ ಖರ್ಚಾದ ದುಡ್ಡೆಷ್ಟು ಗೊತ್ತೆ? ಬರೀ 25 ಲಕ್ಷ.

ಮೈಸೂರು-ಕೆ.ಆರ್.ನಗರಕ್ಕೆ ಓಡುವ ರೈಲಿನಲ್ಲಿ ಸಂಗೀತ ನಿರ್ದೇಶಕ ಶ್ರೀಧರ್ ಬರೆದಿರುವ ಏನಾಗಲಿ ಮುಂದೆ ಸಾಗಲಿ ಬಯಸಿದ್ದು ಸಿಗಲಿ ಬಾಳಲಿ ಹಾಡನ್ನು ರೈಲಿನಲ್ಲಿ ಚಿತ್ರೀಕರಿಸಲಾಯಿತ್ತಂತೆ. ನಿಜಕ್ಕೂ ಇದೊಂದು ಚಾಲೆಂಜಿಂಗ್ ಕೆಲಸ ಅನ್ನುತ್ತಾರೆ ನಿರ್ದೇಶಕ ಮಹೇಶ್. ರಂಗ ಎಸ್ಎಸ್ಎಲ್‌ಸಿ ನಂತರ ಈ ಚಿತ್ರದ ಮೂಲಕ ರಮ್ಯಾ-ಸುದೀಪ್ ಜೋಡಿ ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ.

ಈ ಚಿತ್ರವನ್ನು ಸ್ವತ: ಸುದೀಪ್ ಇಷ್ಟಪಟ್ಟು ಒಪ್ಪಿಕೊಂಡ ನಂತರ ರಮ್ಯಾಗೆ ಫೋನ್ ಮಾಡಿ ಚಿತ್ರವನ್ನು ಒಪ್ಪಿಕೊಳ್ಳಿ ಎಂದು ಹೇಳಿದರಂತೆ. ಸುದೀಪ್ ಸಾಧಾರಣವಾಗಿ ಯಾರಿಗೂ ಚಿತ್ರವನ್ನು ಒಪ್ಪಿಕೋ ಎಂದು ಹೇಳುವುದಿಲ್ಲ. ಆದರೆ ಈ ಚಿತ್ರವನ್ನು ಅವರಾಗಿ ಇಷ್ಟಪಟ್ಟು ಹೇಳಿದ್ದರಿಂದ ಒಪ್ಪಿಕೊಂಡೆ ಎಂದರು ರಮ್ಯಾ. ಭಾವನಾತ್ಮಕ ದೃಶ್ಯಗಳಲ್ಲಿ ಅಭಿನಯಿಸುವುದರಲ್ಲಿ ಸುದೀಪ್ ನಿಸ್ಸಿಮ ಎಂದು ಅವರ ಗುಣಗಾನ ಮಾಡಿದರು ರಮ್ಯಾ.

ಈ ಚಿತ್ರದ ಪಾತ್ರವನ್ನು ಇಷ್ಟಪಟ್ಟು ಸ್ವತ: ರಮ್ಯಾನೇ ಇದಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ಅನುಫ್ರಭಾಕರ್ ನಟಿಸಿದ್ದಾರೆ.
ಮತ್ತಷ್ಟು
ಪ್ರೇಮ್‌ಗೆ ಗೆಲುವು ಬೇಕಿದೆ
ಹೈದರಾಬಾದಿಗೋಡಿದ ನನ್ನವನು
ಪೋಲಿ, ರಾಜ್ ಆದ ಕಥೆ ಗೊತ್ತಾ?
ಗಣೇಶ್ ತಮ್ಮ ಮಹೇಶ್ ಚಿತ್ರರಂಗಕ್ಕೆ
ಹೃದಯದ ನೋವ ತೋಡಿಕೊಂಡ ಹೃದಯಶಿವ
ಗಾಳಿಪಟದಂತೆ ಏರಿದ ರೆಸಾರ್ಟ್ ಬಾಡಿಗೆ