ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುದೀಪ್ ನಮ್ಮಿಂದ ದೂರವಾಗುವರೆ ?
ಕೆಲವು ನಟರು ಕನ್ನಡದಿಂದ ಪರಭಾಷಾ ಚಿತ್ರಕ್ಕೆ ನಟಿಸಲು ಹೋದರೆ ಮತ್ತೆ ಕನ್ನಡಕ್ಕೆ ಬರುವುದಿಲ್ಲ. ಉತ್ತಮ ಅವಕಾಶಗಳು ಅಲ್ಲಿ ಸಿಕ್ಕರೆ ಮತ್ತೆ ಅವರು ಕನ್ನಡಕ್ಕೆ ಬರುವುದಿಲ್ಲ. ಉದಾಹರಣೆಗೆ ನಮ್ಮ ಪ್ರಕಾಶ್ ರೈ. ಈಗ ಈ ಸಾಲಿಗೆ ನಮ್ಮ ಸುದೀಪ್ ಸೇರುತ್ತಾರೋ ಎಂಬ ಭಯ ಕನ್ನಡಿಗರನ್ನು ಕಾಡುತ್ತಿದೆ.

ಇವರಿಗೆ ಬಾಲಿವುಡ್ ಖ್ಯಾತ ನಿರ್ದೇಶಕ ರಾಂಗೋಪಾಲ್ ವರ್ಮಾ ಅವರ ನಿರ್ದೇಶನದ ಫೂ ಎಂಬ ಹಿಂದಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಸದ್ಯ ಸುದೀಪ್ ಅದರ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಇವರು ನಿರ್ದೇಶಿಸಿದ ಶಾಂತಿ ನಿವಾಸ ಚಿತ್ರ ಹೇಳುವಂತಹ ಯಶಸ್ಸು ಕಾಣಲಿಲ್ಲ.

ನಂತರ ಸುದೀಪ್ ಅಭಿನಯಕ್ಕೆ ಮರಳಿದರು. ಇವರು ವಿಶಿಷ್ಟ ಗೆಟಪ್‌ನಲ್ಲಿ ಮಿಂಚಿದ ಗೂಳಿ ಚಿತ್ರ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಈಗ ಇವರು ಅಭಿನಯಿಸಿದ ಮುಸ್ಸಂಜೆ ಮಾತು ಹಾಗೂ ಕಾಮಣ್ಣನ ಮಕ್ಕಳು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗ ಹಿಂದಿಯಲ್ಲಿ ನಟಿಸುತ್ತಿದ್ದಾರೆ. ಅಲ್ಲಿ ಉತ್ತಮ ಅವಕಾಶಗಳು ಸಿಕ್ಕಾಗ ಕನ್ನಡ ಚಿತ್ರರಂಗದಿಂದ ಕಳೆದು ಹೋಗುತ್ತಾರೋ ಎಂಬ ಭಯ ಸಹಜವಾಗಿ ಕಾಡುತ್ತಿದೆ. ಆದರೆ ಸುದೀಪ್ ಪ್ರಕಾರ ನಾನು ಕನ್ನಡಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಅದಕ್ಕಾಗಿಯೇ ಒಪ್ಪಿಕೊಂಡ ಚಿತ್ರವನ್ನು ಮುಗಿಸಿದ ನಂತರ ಹಿಂದಿಯಲ್ಲಿ ನಟಿಸುತ್ತಿದ್ದೇನೆ, ಮುಂದೆಯೂ ಅಷ್ಟೆ ಎನ್ನುತ್ತಾರೆ ಈ ನೀಳಕಾಯ. ಆದರೆ ಯಾವುದಕ್ಕೂ ಮುಂದೆ ನೋಡಬೇಕು.
ಮತ್ತಷ್ಟು
ಬರ್ತಾವ್ನೆ ಮಚ್ಚ
ರೈಲಿನಲ್ಲಿ ಮುಸ್ಸಂಜೆ ಮಾತು
ಪ್ರೇಮ್‌ಗೆ ಗೆಲುವು ಬೇಕಿದೆ
ಹೈದರಾಬಾದಿಗೋಡಿದ ನನ್ನವನು
ಪೋಲಿ, ರಾಜ್ ಆದ ಕಥೆ ಗೊತ್ತಾ?
ಗಣೇಶ್ ತಮ್ಮ ಮಹೇಶ್ ಚಿತ್ರರಂಗಕ್ಕೆ