ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊನೆಯ ಹಂತದಲ್ಲಿ ಶಿವರುದ್ರಯ್ಯನವರ ಮೇಘವರ್ಷಿಣಿ
MOKSHA
ದಾಟುವಿನಂತಹ ಕಲಾತ್ಮಕ ಚಿತ್ರವನ್ನು ನಿರ್ದೇಶಿಸಿದ ಶಿವರುದ್ರಯ್ಯ ಅವರು ನಿರ್ದೇಶಿಸುತ್ತಿರುವ 'ಮೇಘವರ್ಷಿಣಿ' ಚಿತ್ರದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಸಾಯಿಸುತೆ ಅವರ ಕಾದಂಬರಿಯನ್ನು ಆಧರಿಸಿರುವ ಈ ಚಿತ್ರವನ್ನು ಚಿಕ್ಕಮಗಳೂರು, ಕೊಟ್ಟಿಗೆಹಾರ, ಉಡುಪಿ, ಮಲೆಮಾರುತ ಗೆಸ್ಟ್‌ಹೌಸ್‌ಗಳಲ್ಲಿ ಚಿತ್ರೀಕರಿಸಲಾಗಿದೆ.

ಮನಶಾಸ್ತ್ರ ವಿದ್ಯಾರ್ಥಿನಿ ಸಂಶೋಧನೆ ನಡೆಸಲೆಂದು ಪರಿಚಿತರ ಮನೆಗೆ ಬರುತ್ತಾಳೆ. ಅಲ್ಲಿ ವೈದ್ಯ ವಿದ್ಯಾರ್ಥಿಯೊಬ್ಬನಿಗೆ ಮಾನವ ಸಂಬಂಧಗಳ ಪ್ರೀತಿಯ ಚಿಕಿತ್ಸೆ ಕೊಡುವ ಅನಿವಾರ್ಯತೆ ಅವಳಿಗೆ ಎದುರಾಗುತ್ತದೆ. ಆ ಮೇಲೆ ಪ್ರೇಮಾಂಕರವಾಗುತ್ತದೆ. ಆದರೆ ಆಕೆಗೆ ಇನ್ನೊಬ್ಬನ ಜೊತೆ ಮದುವೆ ಏರ್ಪಾಡಾಗುವ ಮೂಲಕ ತ್ರಿಕೋನ ಪ್ರೇಮಕಥೆಯನ್ನು ಮೇರ್ಘವರ್ಷಿಣಿ ಚಿತ್ರ ಒಳಗೊಂಡಿದೆ.

ಆ ದಿನಗಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಆರ್ಚನಾ ಇಲ್ಲಿ ನಾಯಕಿ. ಆರ್ಯ ಚಿತ್ರದ ನಾಯಕ ಈ ಚಿತ್ರದ ನಾಯಕ. ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿರುವ ಮಧುಸೂದನ್ ಇಲ್ಲಿ ಎರಡನೇ ನಾಯಕನಾಗಿ ನಟಿಸುತ್ತಿದ್ದಾರೆ. ಎಸ್.ಪಿ. ವೆಂಕಟೇಶ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಆರ್.ಗಿರಿ ಕ್ಯಾಮರಾ ಹಿಡಿದಿದ್ದಾರೆ. ಚಿತ್ರಕ್ಕೆ ಸುಂದರ್ ಅರಸ್ ಸಂಕಲನ ಮಾಡಿದ್ದಾರೆ.
ಮತ್ತಷ್ಟು
ಪೂರ್ಣಗೊಂಡ ಮಹರ್ಷಿ
ಸುದೀಪ್ ನಮ್ಮಿಂದ ದೂರವಾಗುವರೆ ?
ನಟನೆಯಿಂದ ನಿರ್ದೇಶನದತ್ತ ಶಿವಧ್ವಜ್
ಬರ್ತಾವ್ನೆ ಮಚ್ಚ
ರೈಲಿನಲ್ಲಿ ಮುಸ್ಸಂಜೆ ಮಾತು
ಪ್ರೇಮ್‌ಗೆ ಗೆಲುವು ಬೇಕಿದೆ