ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
250 ಕಂತು ಪೂರೈಸಿದ ರಾಧಾ
MOKSHA
ಅದೊಂದು ವಿಶಿಷ್ಟ ಸಮಾರಂಭ. ಕಿರುತೆರೆ ಕಲಾವಿದರ ಸಂಘದ ಕಚೇರಿ ಆವರಣದಲ್ಲಿ ಕಿರುತೆರೆಯ ಕಲಾವಿದರ ದಂಡೇ ಸೇರಿತ್ತು. ಭವ್ಯವಾದ ವೇದಿಕೆ ರವಿ ಬೆಳಗೆರೆ ಅವರಿಗಾಗಿ ಕಾಯುತ್ತಿತ್ತು.

ರವಿಬೆಳಗೆರೆ ಪುತ್ರಿ ಭಾವನಾ ನಿರ್ಮಾಣದ 'ರಾಧಾ' ಧಾರವಾಹಿ 250 ಕಂತನ್ನು ಪೂರೈಸಿದ ಸಂತೋಷ ಕೂಟವನ್ನು ಏರ್ಪಡಿಸಲಾಗಿತ್ತು. "ನಾನು ಮತ್ತು ಸ್ನೇಹಿತ ಕಿಟ್ಟಿ ಹೆದರಿಕೊಂಡೆ ಈ ಧಾರಾವಾಹಿ ಮಾಡಲು ಮುಂದಾದೆವು. ಆದರೆ ಇದು ಹೆಮ್ಮರವಾಗಿ ಬೆಳೆಯುತ್ತ ಹೋಯಿತು ಎಂದು" ರಾಧಾ ಹುಟ್ಟಿದ ಬಗ್ಗೆ ಹೇಳಿದರು ಭಾವನಾ.

"ನನ್ನ ಯಾವುದೇ ಪ್ರಮೇಯವಿಲ್ಲದೇ ಧಾರವಾಹಿ 250 ಕಂತು ಪೂರೈಸಿದೆ. ಮುಂದೆ ಇದು 500, 1000 ಕಂತುಗಳನ್ನು ಪೂರೈಸಲಿ. ರಾಧಾಗೆ ಸ್ಪರ್ಧೆ ನೀಡುವಂತಹ ಮತ್ತೊಂದು ಧಾರಾವಾಹಿ ಹಾಗೂ ಸ್ಟುಡಿಯೋ ನಿರ್ಮಿಸುತ್ತಿದ್ದೇವೆ. ಇವೆಲ್ಲದರ ಮಾಲಕಿ ಭಾವನಾ" ಎಂದರು ರವಿ ಬೆಳಗೆರೆ.

ಕಾರ್ಯಕ್ರಮದಲ್ಲಿ ರಾಧಾ ಧಾರಾವಾಹಿಯ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಫಲಕ ವಿತರಿಸಲಾಯಿತು.
ಮತ್ತಷ್ಟು
ಕೊನೆಯ ಹಂತದಲ್ಲಿ ಶಿವರುದ್ರಯ್ಯನವರ ಮೇಘವರ್ಷಿಣಿ
ಪೂರ್ಣಗೊಂಡ ಮಹರ್ಷಿ
ಸುದೀಪ್ ನಮ್ಮಿಂದ ದೂರವಾಗುವರೆ ?
ನಟನೆಯಿಂದ ನಿರ್ದೇಶನದತ್ತ ಶಿವಧ್ವಜ್
ಬರ್ತಾವ್ನೆ ಮಚ್ಚ
ರೈಲಿನಲ್ಲಿ ಮುಸ್ಸಂಜೆ ಮಾತು