ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹರಿಕೃಷ್ಣರಿಗೆ ಆಫರ್‌ಗಳ ಸುರಿಮಳೆ
MOKSHA
ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಲ್ಲಿ ಗುಂಯ್ಗುಡುವ 'ಮಿಂಚಾಗಿ ನೀನು ಬರಲು....' ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ.

ಹರಿಕೃಷ್ಣರ ಗುಣವೇ ಹಾಗೆ. ಅವರಾಗಿ ಸುದ್ದಿ ಮಾಡುವುದಿಲ್ಲ. ಆದರೆ ಅವರು ಮಾಡುವ ಕೆಲಸವಂತೂ ಭರ್ಜರಿ ಸುದ್ದಿ ಮಾಡುತ್ತದೆ. ಇವರು ಸಂಗೀತ ನೀಡಿದ ಜೊತೆ ಜೊತೆಯಲಿ ಚಿತ್ರದ ಓ ಗುಣವಂತ... ಹಾಡು ಜನಪ್ರಿಯವಾಯಿತು. ಆದರೆ ಇವರು ಸಂಗೀತ ನೀಡಿದ ಗಾಳಿಪಟದ , ಗಜ ಚಿತ್ರದ ಹಾಡುಗಳು ಭರ್ಜರಿ ಜಪ್ರಿಯವಾಯಿತು.

ಈಗ ಹರಿಕೃಷ್ಬಗೆ ಗಾಂಧಿನಗರದಲ್ಲಿ ಬೇಡಿಕೆ ಹೆಚ್ಚಿದೆ. ಇಲ್ಲಿನ ಪಂಡಿತರು ಹರಿಕೃಷ್ಣ ಅವರ ಸಾಮರ್ಥ್ಯ ಏನೆಂಬುದನ್ನು ಅರಿತ್ತಿದ್ದಾರೆ. ಈ ವರ್ಷವೊಂದರಲ್ಲೇ ಹರಿಕೃಷ್ಣ ಅವರ ಕೈಯಲ್ಲಿ ಮೇಘವೇ ಮೇಘವೇ, ಇಂದ್ರ, ನವಗ್ರಹ, ರಾಜ್ಕುಮಾರಿ, ಪಯಣ, ರಾಜ್, ಅರ್ಜುನ್, ಅಂಬಾರಿ, ಸಿಹಿಮುತ್ತು, ಪರಮೇಶಿ ಪಾನ್ವಾಲ ಹಾಗೂ ಚೆಲುವೆಯೇ ನಿನ್ನ ನೋಡಲು ಚಿತ್ರಗಳಿವೆ.

ಹಿಂದೆ ಇವರು ಹಂಸಲೇಖಾ, ರವಿಚಂದ್ರನ್, ಗುರುಕಿರಣ್, ಸಾಧುಕೋಕಿಲ ಮುಂತಾದ ಸಂಗೀತ ನಿರ್ದೇಶಕರಲ್ಲಿ ಕೀಬೋರ್ಡ್ ಪ್ಲೇಯರ್ ಆಗಿ ಕೆಲಸ ಮಾಡಿದ್ದರು. ಹರಿಕೃಷ್ಣ ಅವರು ಯಾವುದೇ ಒಂದು ಚಿತ್ರಕ್ಕೂ ಅವಸರದಲ್ಲಿ ಸಂಗೀತ ನಿರ್ದೇಶಿಸುವುದಿಲ್ಲವಂತೆ. ಅದು ತನ್ನಿಂದ ಸಾಧ್ಯವೂ ಇಲ್ಲ ಎನ್ನುತ್ತಾರೆ ಈ ಹರಿ.
ಮತ್ತಷ್ಟು
250 ಕಂತು ಪೂರೈಸಿದ ರಾಧಾ
ಕೊನೆಯ ಹಂತದಲ್ಲಿ ಶಿವರುದ್ರಯ್ಯನವರ ಮೇಘವರ್ಷಿಣಿ
ಪೂರ್ಣಗೊಂಡ ಮಹರ್ಷಿ
ಸುದೀಪ್ ನಮ್ಮಿಂದ ದೂರವಾಗುವರೆ ?
ನಟನೆಯಿಂದ ನಿರ್ದೇಶನದತ್ತ ಶಿವಧ್ವಜ್
ಬರ್ತಾವ್ನೆ ಮಚ್ಚ