ಹಾಡುಗಳ ಹೆಸರನ್ನೇ ಹೆಸರಾಗಿಟ್ಟು ಬರುತ್ತಿರುವ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ಜೊತೆಯಾಗಿ ಹಿತವಾಗಿ. ಹಿಂದೆ ಶಿವರಾಜ್ ಕುಮಾರ್ ನಟಿಸಿದ ರಥಸಪ್ತಮಿ ಚಿತ್ರದ ಹಾಡಿನ ಸಾಲಿದು.
ಚಿತ್ರದ ಚಿತ್ರೀಕರಣ ಸದ್ದಿಲ್ಲದೇ ಈಗಾಗಲೇ ಅರ್ಧದಷ್ಟು ಪೂರ್ಣಗೊಂಡಿದೆ. ಚಿತ್ರವನ್ನು ಎಸ್.ಕೆ.ಶ್ರೀನಿವಾಸ್ ನಿರ್ದೇಶಿಸುತ್ತಿದ್ದಾರೆ. ಇದು ಇವರಿಗೆ ಮೊದಲ ಚಿತ್ರ. ಯಾವುದೇ ಸದ್ದು ಗದ್ದಲವಿಲ್ಲದೇ ಮಾಧ್ಯಮದರನ್ನು ಜಾಸ್ತಿ ಓಲೈಸದೆ ಚಿತ್ರೀಕರಣ ಮುಗಿಸುತ್ತಿದ್ದಾರೆ.
ಚಿತ್ರೀಕರಣ ಸದ್ಯಕ್ಕೆ ಸಾವಾದುರ್ಗದಲ್ಲಿ ನಡೆಯುತ್ತಿದೆ. ತಾರಾಗಣದಲ್ಲಿ ಚಂದನ್, ತೇಜಸ್ವಿನಿ, ತಾರಾ, ನವೀನ್ ಹಾಗೂ ಇತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಡ್ರಮ್ಮರ್ ದೇವ ಸಂಗೀತ ನೀಡುತ್ತಿದ್ದು, ಹರೀಶ್ ಕತೆ ಹಾಗೂ ಸಂಭಾಷಣೆ ನೀಡಿದ್ದಾರೆ. ಚಿತ್ರವನ್ನು ಅರವಿಂದ್ ಮತ್ತು ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ.
|