ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮನ್ಮಥನ ಪ್ರೇಮಕಥೆ ಹೋಳಿ
ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಚಿತ್ರಗಳು ಬರುತ್ತಿವೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆ ಹೋಳಿ. ಚಿತ್ರದ ನಿರ್ದೇಶಕ ಶಂಕರಲಿಂಗ ಸುಗ್ಗನಹಳ್ಳೀ ರತಿ, ಮನ್ಮಥರ ಪ್ರೇಮಕಥೆಯನ್ನಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದಾರೆ.

ಇದೇ 14 ರಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಬ್ಯಾಗ್ರೌಂಡ್ ಐತಿಹಾಸಿಕವಾಗಿರುತ್ತದೆ. ಹಳ್ಳಿಯಲ್ಲಿ ನಡೆಯುವ ಕಥೆಯಿದು. ಚಿತ್ರದಲ್ಲಿ ನಾಯಕಿ ದೇವದಾಸಿ. ಮೇಲ್ಜಾತಿಗೆ ಸೇರಿದ ನಾಯಕ ಆಕೆಯನ್ನು ಪ್ರೀತಿಸುತ್ತಾನೆ. ಆದರೆ ಜಾತಿ ಕಾರಣದಿಂದ ಇವರು ಎದುರಿಸುವ ಕಷ್ಟಗಳನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ ಎಂದರು ನಿರ್ದೇಶಕ ಶಂಕರಲಿಂಗ.

ಇವರು ಹಿಂದೆ ಸ್ಟೇಶನ್ ಮಾಸ್ಟರ್, ಕಥೆಯಾದ ಕಾಳ ಚಿತ್ರಗಳನ್ನು ನಿರ್ದೇಶಿಸಿದ್ದರು. ಚಿತ್ರದಲ್ಲಿ ಹೋಲಿ ಹಬ್ಬದ ದಿನ ಕಾಮಣ್ಣನನ್ನು ಏಕೆ ಸುಡುತ್ತಾರೆ ಎಂಬುದನ್ನು ತೋರಿಸುತ್ತಾರಂತೆ. ಇಲ್ಲಿ ಯಾವುದೇ ರೀತಿಯ ಆಶ್ಲೀಲತೆಗೆ ಅವಕಾಶವಿಲ್ಲ ಎಂದರು. ನಾಯಕನಾಗಿ ವೆಂಕಟೇಶ್ ಪ್ರಸಾದ್ ಹಾಗೂ ನಾಯಕಿಯಾಗಿ ರಾಗಿಣಿ ನಟಿಸುತ್ತಿದ್ದಾರೆ.
ಮತ್ತಷ್ಟು
ಎದ್ದೇಳು ಮಂಜನಾಥನಿಗೆ ಡಬ್ಬಿಂಗ್
ಟೀ ಅಂಗಡಿಯಲ್ಲಿ ಅಂಬಾರಿ
ಜೊತೆಯಾಗಿ ಹಿತವಾಗಿ
ಹಸಿರಿನ ನಡುವೆ ನಮ್ಮೆಜಮಾನ್ರು
ಹರಿಕೃಷ್ಣರಿಗೆ ಆಫರ್‌ಗಳ ಸುರಿಮಳೆ
250 ಕಂತು ಪೂರೈಸಿದ ರಾಧಾ