ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾರಂಜಿಯಲ್ಲಿ ರಾಧಿಕಾ ಗಾಂಧಿ
ಮುಂಬೈಯಿಂದ ಬಂದು ಕೇವಲ ಒಂದು ಚಿತ್ರದಲ್ಲೇ ಇಡೀ ಕರ್ನಾಟಕದ ಜನತೆಯನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ ಬೆಡಗಿಗೆ ಈಗ ಕನ್ನಡದಲ್ಲಿ ಸಾಕಷ್ಟು ಅವಕಾಶಗಳಿವೆ. ಈಗ ಆಕೆಯ ಹಾದಿಯಲ್ಲೇ ಮುಂದುವರಿಯುವ ಪ್ರಯತ್ನವನ್ನು ಆಕೆಯ ತಂಗಿಯೂ ಮಾಡುತ್ತಿದ್ದಾರೆ.

ಯಾರ ಬಗ್ಗೆ ಹೇಳುತ್ತಿದ್ದೇನೆಂದು ಗೊಂದಲಬೇಡ. ಇದು ಮುಂಗಾರು ಮಳೆಯ ಬೆಡಗಿ ಪೂಜಾಗಾಂಧಿ ಹಾಗೂ ಆಕೆಯ ತಂಗಿ ರಾಧಿಕಾಗಾಂಧಿ ಬಗ್ಗೆ. ಪೂಜಾಳ ತಂಗಿ ಈಗಾಗಲೇ ಚಿತ್ರರಂಗ ಪ್ರವೇಶಿಸಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಆ ಚಿತ್ರಗಳು ತೆರೆಕಾಣಬೇಕಷ್ಟೆ. ಈಗ ಈ ಬೆಡಗಿಗೆ ಮತ್ತೊಂದು ಅವಕಾಶ ಬಂದಿದೆ. ಎನ್.ಎಂ. ಸುರೇಶ ನಿರ್ಮಾಣದ ಕಾರಂಜಿ ಚಿತ್ರದಲ್ಲಿ ರಾಧಿಕಾ ಗಾಂಧಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸುರೇಶ್ ಹಿಂದೆ ನಿರ್ಮಿಸಲು ಹೊರಟ ಗಾಂಧಿ ಸ್ಮೈಲ್ ಚಿತ್ರ ಇನ್ನು ತೆರೆಕಾಣಬೇಕಷ್ಟೆ. ನಿರ್ಮಾಪಕ ಸುರೇಶ್ ತಮ್ಮ ಕಾರಂಜಿ ಚಿತ್ರದ ಬಗ್ಗೆ ಸಾಕಷ್ಟು ನೀರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಕಾರಂಜಿ ಅವರಿಗೆ ತಂಪೆರೆಯುತ್ತದೋ ಕಾದು ನೋಡಬೇಕು.
ಮತ್ತಷ್ಟು
ಮನ್ಮಥನ ಪ್ರೇಮಕಥೆ ಹೋಳಿ
ಎದ್ದೇಳು ಮಂಜನಾಥನಿಗೆ ಡಬ್ಬಿಂಗ್
ಟೀ ಅಂಗಡಿಯಲ್ಲಿ ಅಂಬಾರಿ
ಜೊತೆಯಾಗಿ ಹಿತವಾಗಿ
ಹಸಿರಿನ ನಡುವೆ ನಮ್ಮೆಜಮಾನ್ರು
ಹರಿಕೃಷ್ಣರಿಗೆ ಆಫರ್‌ಗಳ ಸುರಿಮಳೆ