ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುತೂಹಲ ಮೂಡಿಸಿರುವ ದರ್ಶನ್‌ನ 'ಅರ್ಜುನ'  Search similar articles
MOKSHA
ದರ್ಶನ್ ಮತ್ತೊಂದು ಅದ್ದೂರಿ ಹಾಗೂ ಅಬ್ಬರದ ಚಿತ್ರ 'ಅರ್ಜುನ್'ನ ಹಾಡುಗಳನ್ನು ಬ್ಯಾಂಕಾಕ್‌ನಲ್ಲಿ ಚಿತ್ರೀಕರಿಸಲಾಗಿದೆ. ಕನ್ನಡಕ್ಕೊಬ್ಬನೇ ಅರ್ಜುನ ಈ ಸಾಲು ಹೊಂದಿರುವ ಹಾಡನ್ನು ರಷ್ಯಾದ ನೃತ್ಯಗಾರರೊಂದಿಗೆ ನಾಯಕ ದರ್ಶನ್ ನರ್ತಿಸಿದ್ದನ್ನು ಹಾಗೂ ನಟ ಶರತ್ ಲೋಹಿತಾಶ್ವ ಅವರು ಸಹ ನೃತ್ಯಗಾರರೊಂದಿಗೆ ನರ್ತಿಸುವ ದೃಶ್ಯವನ್ನು ಬ್ಯಾಂಕಾಕ್‌ನಲ್ಲಿ ಚಿತ್ರೀಕರಿಸಲಾಗಿದೆ.

ಒಂದೊಮ್ಮೆ ತಮ್ಮ ಮಾರ್ಕೆಟ್ ಕಳೆದುಕೊಂಡಿದ್ದ ದರ್ಶನ್ ಗಜ ಚಿತ್ರದ ಮೂಲಕ ಮತ್ತೆ ಮಾರ್ಕೆಟ್ ಕಂಡುಕೊಂಡಿದ್ದಾರೆ. ಗಜದ ನಂತರ ಇವರ ಇಂದ್ರ ಚಿತ್ರದ ಬಗ್ಗೆ ಉದ್ಯಮದಲ್ಲಿ ಭಾರೀ ನಿರೀಕ್ಷೆ ಇತ್ತು. ಆದರೆ ಚಿತ್ರ ಬಿಡುಗಡೆಯಾದ ನಂತರ ಪ್ರೇಕ್ಷಕರು ಇದನ್ನು ಜಾಸ್ತಿ ಇಷ್ಟಪಡಲಿಲ್ಲ.

ಈಗ ಅರ್ಜುನ್ ಚಿತ್ರದ ಬಗ್ಗೆ ಉದ್ಯಮದಲ್ಲಿ ಮತ್ತೆ ಕುತೂಹಲ ಮೂಡಿದೆ. ಇಲ್ಲಿ ದರ್ಶನ್ ಪೊಲೀಸ್ ಅಧಿಕಾರಿ ಪಾತ್ರವನ್ನು ಮಾಡುತ್ತಿದ್ದಾರೆ. ಇಲ್ಲಿಯೂ ಸಾಹಸ ಪ್ರಿಯರಿಗೆ ಭರ್ಜರಿ ಫೈಟಿಂಗ್ ದೃಶ್ಯಗಳಿವೆ. ಚಿತ್ರವನ್ನು ಶಾಹುರಾಜ್ ಶಿಂಧೆ ನಿರ್ದೇಶಿಸುತ್ತಿದ್ದು, ಹರಿಕೃಷ್ಣ ಸಂಗೀತ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆಯಿದೆ. ಚಿತ್ರದಲ್ಲಿ ದರ್ಶನ್, ಅನಂತ್ನಾಗ್, ಅವಿನಾಶ್, ಮೀರಾಚೋಪ್ರಾ, ಬುಲೆಟ್ ಪ್ರಕಾಶ್ ನಟಿಸುತ್ತಿದ್ದಾರೆ.
ಮತ್ತಷ್ಟು
ಭರದಿಂದ ಸಾಗಿರುವ 'ನಮ್ಮೆಜಮಾನ್ರು' ಚಿತ್ರೀಕರಣ
ಚೀನಾದಲ್ಲಿ 'ಬುದ್ದಿವಂತ' ಹಾಡಿನ ಚಿತ್ರೀಕರಣ
ವಿಶಿಷ್ಟ ಲೈಫ್ ಸ್ಟೈಲ್
ಸ್ಕ್ರೀನ್ ಮೇಲೆ ಹೊಗೆ
ಚಿಕ್ಕಪೇಟೆ ಸಾಚಾಗಳು
'ಕಲ್ಲೇ ಬಲ್ಲೇ', ಕನ್ನಡದ ಕೊಲೆ