ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಲ್ಪನಾ ಹೌಸ್‌ನ ಕೊಲೆಯ ಸುತ್ತ  Search similar articles
ಅದೊಂದು ಎಸ್ಟೇಟ್ ನಡುವಿರುವ ಮನೆ. ಸುತ್ತಲೂ ಒಂದಿಷ್ಟು ಕೊಲೆಗಳು ನಡೆಯುತ್ತಿರುತ್ತವೆ. ಆದರೆ ಯಾರೂ ಆ ಕೊಲೆಗಳನ್ನು ಮಾಡುತ್ತಾರೆ ಎಂಬುದು ಮಾತ್ರ ಸಸ್ಪೆನ್ಸ್ ಆಗಿಯೇ ಉಳಿಯುತ್ತದೆ. ಆ ಮನೆಯಲ್ಲಿರುವವರಿಗೆಲ್ಲ ಒಂಟಿತನ ಕಾಡುತ್ತದೆ. ಕೊಲೆಯ ಸುಳಿಯಿಂದ ಮನೆಯೊಡತಿ ಕಂಗಾಲಾಗುತ್ತಾರೆ. ಈ ರೀತಿಯ ಒಂದು ಮನೋವೈಜ್ಞಾನಿಕ ಹಿನ್ನೆಲೆಯಿಂದ ಬರುತ್ತಿರುವ ಚಿತ್ರ 'ನಂ.18 ಕಲ್ಪನಾ ಹೌಸ್'.

ಇದೊಂದು ಫುಲ್ ಸಸ್ಪೆನ್ಸ್ ಚಿತ್ರವಾದ್ದರಿಂದ ಚಿತ್ರದ ಕಥೆಯನ್ನು ಹೇಳುವುದಿಲ್ಲ ಎನ್ನುತ್ತಾರೆ ನಿರ್ದೇಶಕ ಚಂದ್ರಶೇಖರ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವ ಮೂಲಕ ಚಂದ್ರಶೇಖರ್ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಮಡಿಕೇರಿ ಎಸ್ಟೇಟ್ ಹಾಗೂ ಬೆಂಗಳೂರಿನಲ್ಲಿ ಮನೆಯಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಈ ಹಿಂದೆ ಖಳನಾಯಕನಾಗಿ ಅಬ್ಬರಿಸಿದ ಹರೀಶ್ ರಾಯ್ ಈ ಚಿತ್ರದಲ್ಲಿ ತಮ್ಮ ಉದ್ದ ಕೂದಲನ್ನು ಕಟ್ ಮಾಡಿ ನಾಯಕನಾಗಿ ನಟಿಸುತ್ತಿದ್ದಾರೆ. ತಮ್ಮ ಹಿಂದಿನ ನೆಗೆಟಿವ್ ಗೆಟಪ್ಪನ್ನು ಈ ಚಿತ್ರದ ಮೂಲಕ ಮರೆಮಾಚುವ ಪ್ರಯತ್ನದಲ್ಲಿದ್ದಾರೆ. ಚಿತ್ರದಲ್ಲಿ ಸ್ತುತಿ ಮಿಶ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ.
ಮತ್ತಷ್ಟು
ವಿದ್ಯಾರ್ಥಿಗಳಿಗೆ ನೀತಿಪಾಠ ಹೇಳುವ ಪಿಯುಸಿ
ಮಸ್ತ್ ಮಜಾ ಮಾಡಿ
ಬಿರುಗಾಳಿ'ಗೆ ರಥೋತ್ಸವ ಚಿತ್ರೀಕರಣ
ಮಾರುಕಟ್ಟೆಯಲ್ಲಿ ವಂಶಿ 'ಫೈಟಿಂಗ್'
ಕುತೂಹಲ ಮೂಡಿಸಿರುವ ದರ್ಶನ್‌ನ 'ಅರ್ಜುನ'
ಭರದಿಂದ ಸಾಗಿರುವ 'ನಮ್ಮೆಜಮಾನ್ರು' ಚಿತ್ರೀಕರಣ