ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಂಧಿ ನಗರದ 'ಸ್ಟಾರ್' ಆದ ಗಣೇಶ್  Search similar articles
MOKSHA
ದುಡ್ಡಿದ್ದೋನು ದೊಡ್ಡಪ್ಪ ಎಂಬುದು ಸಾಮಾನ್ಯ ಗಾದೆ. ಆದರೆ ಈಗ ಗಾಂಧಿನಗರದಲ್ಲಿ ಹೊಸದೊಂದು ಗಾದೆ ಹುಟ್ಟಿಕೊಂಡಿದೆ. 'ಸ್ಟಾರ್ ಅದೋನೇ ನಮ್ಮಣ್ಣ'. ಈ ಮಾತು ಮೊನ್ನೆ ಗಣೇಶ್ ಹುಟ್ಟುಹಬ್ಬದ ದಿವಸ ಅಕ್ಷರಶ: ಅನ್ವಯಿಸುತ್ತದೆ.

ಜು. 2ರಂದು ಗಣೇಶ್ ತಮ್ಮ ಹುಟ್ಟುಹಬ್ಬ. ಅಂದಿನ ಹೆಚ್ಚಿನ ಎಲ್ಲ ಪತ್ರಿಕೆಗಳು ಕೂಡಾ ಗಣೇಶ್ ಹುಟ್ಟುಹಬ್ಬಕ್ಕೆ ಶುಭಕೋರುವ ನಿರ್ಮಾಪಕರ ಜಾಹೀರಾತುಗಳಿಂದ ತುಂಬಿ ಹೋಗಿದ್ದವು. ಈಗಾಗಲೇ ಗಣೇಶ್ ನಟಿಸಿದ, ನಟಿಸಲು ಒಪ್ಪಿಕೊಂಡ ಹಾಗೂ ಮುಂದಕ್ಕೆ ನಟಿಸಲಿರುವ ಚಿತ್ರಗಳ ನಿರ್ಮಾಪಕರು ಗಣೇಶ್‌ಗೆ ಭರ್ಜರಿಯಾಗಿ ಶುಭ ಕೋರಿದರು.

ಮೂರು ವರ್ಷ ಹಿಂದಕ್ಕೆ ಹೋಗಿ ನೆನಪಿಸಿಕೊಂಡರೆ ಗಣೇಶ್‌ನ ಹುಟ್ಟುಹಬ್ಬಕ್ಕೆ ಗಾಂಧಿನಗರದ ಯಾವೊಬ್ಬ ನರಪಿಳ್ಳೆಯೂ ಶೂಭ ಕೋರಿಲ್ಲ. ಆದರೆ ಈಗ ಗಣೇಶ್ ಸ್ಟಾರ್ ಆಗಿದ್ದಾರೆ. ಅವರನ್ನು ಹಾಕಿಕೊಂಡು ಸಿನಿಮಾ ಮಾಡುವುದೇ ಒಂದು ಗೇಟ್ ಎಂಬ ಭಾವನೆ ಇದೆ. ಈ ಹಿಂದೆ ಈ ನಿರ್ಮಾಪಕರೆಲ್ಲ ಸುದೀಪ್ ದರ್ಶನ್ ಸೇರಿದಂತೆ ಇತರ ಕೆಲವು ನಾಯಕರಿಗೆ ಶುಭಾಶಯ ಕೋರುತ್ತಿದ್ದರು. ಆದರೆ ಅವರ ಮಾರುಕಟ್ಟೆ ಈಗ ಕುಸಿದಿದೆ. ಈಗೇನಿದ್ದರೂ ಗಣೇಶ್ ಜಮಾನಾ. ಹೇಗಿದೆ ಗಾಂಧಿನಗರದ ಗಾದೆ.
ಮತ್ತಷ್ಟು
ಕಲ್ಪನಾ ಹೌಸ್‌ನ ಕೊಲೆಯ ಸುತ್ತ
ವಿದ್ಯಾರ್ಥಿಗಳಿಗೆ ನೀತಿಪಾಠ ಹೇಳುವ ಪಿಯುಸಿ
ಮಸ್ತ್ ಮಜಾ ಮಾಡಿ
ಬಿರುಗಾಳಿ'ಗೆ ರಥೋತ್ಸವ ಚಿತ್ರೀಕರಣ
ಮಾರುಕಟ್ಟೆಯಲ್ಲಿ ವಂಶಿ 'ಫೈಟಿಂಗ್'
ಕುತೂಹಲ ಮೂಡಿಸಿರುವ ದರ್ಶನ್‌ನ 'ಅರ್ಜುನ'