ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಡಿನ ಗೊಂದಲ  Search similar articles
MOKSHA
ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. ನಿನ್ನ ಪೂಜೆಗೆ ಬಂದೆ ಮಾದೇಶ್ವರ ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಈಗ ಇದು ಯಾವ ಚಿತ್ರದ ಹಾಡು?

ಈ ಗೊಂದಲ ಅನೇಕರಿಗಿದೆ. ಆದರೆ ಇದು ಸೈಕೋ ಚಿತ್ರದ ಹಾಡು. ಇಲ್ಲಿ ಮಾದೇಶ್ವರ ಎಂಬ ಹೆಸರು ಬಂದಿದ್ದರಿಂದ ಅನೇಕರು ಇದು ಶಿವರಾಜ್ ಕುಮಾರ್ ಅಭಿನಯದ ಮಾದೇಶ್ವರ ಚಿತ್ರದ ಹಾಡು ಎಂದು ಭಾವಿಸಿದ್ದಾರೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್ ಶ್ರಮ ಪಟ್ಟು ಈ ರೀತಿಯ ಒಂದು ಉತ್ತಮ ಸಂಗೀತ ನೀಡಿದ್ದಾರೆ.

ಹಾಡು ಈಗಾಗಲೇ ಎಲ್ಲಡೆ ಜನಪ್ರಿಯವಾಗಿದೆ. ಇದರಿಂದ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಚಿತ್ರತಂಡ ಹೊಂದಿದೆ. ಆದರೆ ಹಾಡಿನ ಗೊಂದಲವನ್ನು ನಿವಾರಿಸಲು ಚಿತ್ರತಂಡ ಒಂದು ಉಪಾಯಕ್ಕೆ ಮುಂದಾಗಿದೆ. ಅದೇನೆಂದರೆ ಸೈಕೋ ಚಿತ್ರದ ವಾಲ್ ಪೋಸ್ಟರ್‌ಗಳಲ್ಲಿ ನಿನ್ನ ಪೂಜೆಗೆ ಬಂದೆ ಮಾದೇಶ್ವರ ಎಂದು ಬರೆಯಲು ಮುಂದಾಗಿದೆ.

ಈವರೆಗೆ ಚಿತ್ರದ ನಾಯಕ -ನಾಯಕಿ ಯಾರೆಂಬುದನ್ನು ನಿರ್ದೇಶಕರು ಬಹಿರಂಗ ಪಡಿಸಿಲ್ಲ.
ಮತ್ತಷ್ಟು
ಗಾಂಧಿ ನಗರದ 'ಸ್ಟಾರ್' ಆದ ಗಣೇಶ್
ಕಲ್ಪನಾ ಹೌಸ್‌ನ ಕೊಲೆಯ ಸುತ್ತ
ವಿದ್ಯಾರ್ಥಿಗಳಿಗೆ ನೀತಿಪಾಠ ಹೇಳುವ ಪಿಯುಸಿ
ಮಸ್ತ್ ಮಜಾ ಮಾಡಿ
ಬಿರುಗಾಳಿ'ಗೆ ರಥೋತ್ಸವ ಚಿತ್ರೀಕರಣ
ಮಾರುಕಟ್ಟೆಯಲ್ಲಿ ವಂಶಿ 'ಫೈಟಿಂಗ್'