ಯೋಗೀಶ್ ಅಭಿನಯದ ಇನ್ನೊಂದು ಚಿತ್ರ ಅಂಬಾರಿ ಮೆರವಣಿಗೆಗೆ ಸಿದ್ದಗೊಂಡಿದೆ. ಸೂರಿ ನಿರ್ದೇಶನದ ದುನಿಯಾ ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡ ಯೋಗೀಶ್, ಲೂಸ್ ಮಾದನಾಗಿಯೇ ಗಾಂಧಿನಗರದಲ್ಲಿ ಗುರುತಿಸಿಕೊಂಡರು.
ನಂದ ಲವ್ಸ್ ನಂದಿತದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡು ಚಿತ್ರ ಶತಮಾನೋತ್ಸವವನ್ನು ಆಚರಿಸಿದ್ದು ಆಯಿತು. ಈಗ ಸ್ಟಾರ್ ವ್ಯಾಲ್ಯೂ ಸಿಕ್ಕಿದ್ದು ಮತ್ತೊಂದು ವಿಸ್ಮಯ. ಮುಂದಿನ ಚಿತ್ರ ಅಂಬಾರಿ ತೆರೆಗೆ ಸಿದ್ದಗೊಂಡಿದೆ. ಇದುವರೆಗೆ ಲಾಂಗ್ ಮಚ್ಚುಗಳಲ್ಲಿ ರಾರಾಜಿಸುತ್ತಿದ್ದ ಯೋಗೀಶ್ ಈ ಚಿತ್ರದಲ್ಲಿ ಗುಲಾಬಿ ಹೂ ಹಿಡಿದುಕೊಂಡಿದ್ದಾರೆ.
ಅಂಬಾರಿ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದ ಯೋಗಿಶ್ ತಂದೆ ಟಿ.ಪಿ. ಸಿದ್ದರಾಜು ಚಿತ್ರತಂಡದಿಂದ ಹೊರನಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಚಿತ್ರೀಕರಣಕ್ಕೆ ಮಾತ್ರ ಯಾವುದೇ ಅಡ್ಡಿಯಾಗಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಶೀಘ್ರದಲ್ಲಿ ಅಂಬಾರಿಯ ಮೆರವಣಿಗೆ ಪ್ರಾರಂಭಗೊಳ್ಳಲಿದೆ.
|