'ಮನಸುಗಳ ಮಾತು ಮಧುರ' ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಈ ಬಾಲೆ ಆ ಚಿತ್ರದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಾಕೋ ವಿಫಲವಾದಳು. ಆದರೆ ಈಕೆಗೆ ಅವಕಾಶಗಳಿಗೇನೂ ಕೊರತೆಯಾಗಿಲ್ಲ. ಎರಡು ವಾರಗಳ ಹಿಂದೆ ಈಕೆಯ 'ವಸಂತಕಾಲ' ಚಿತ್ರ ತೆರೆಕಂಡಿದೆ. ಈ ಚಿತ್ರಕ್ಕೂ ಪ್ರೇಕ್ಷಕರು ಹಿಂದೆ ಮುಂದೆ ನೋಡಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಈ ನಡುವೆಯೇ ಈ ಬೆಡಗಿ ಒಂದು ಕನ್ನಡ ಹಾಗೂ ಒಂದು ತಮಿಳು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕನ್ನಡ ಚಿತ್ರ ಈ ಸಂಭಾಷಣೆಯ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ತಮಿಳು ಚಿತ್ರಕ್ಕಾಗಿ ಈಕೆ ತಮಿಳು ಮಾತನಾಡಲು ಕಲಿತಿದ್ದಾರಂತೆ. ಈಕೆಗೆ ಎಕ್ಸ್ಪೋಸ್ ಮಾಡಲು ಇಷ್ಟವಿಲ್ಲ ಎನ್ನುವ ಈ ನಟಿಮಣಿ ಅದಕ್ಕಾಗಿ ನಿರ್ದೇಶಕರಲ್ಲಿ ಮುಂಚೆಯೇ ಚಿತ್ರದಲ್ಲಿ ಯಾವ ತರಹದ ಕಾಸ್ಟ್ಯೂಮ್ ಬಳಕೆಯಾಗುತ್ತದೆ ಎಂದು ಕೇಳುತ್ತಾರಂತೆ. ಒಂದು ವೇಳೆ ಕಥೆ ಚೆನ್ನಾಗಿದ್ದು, ಅದಕ್ಕೆ ತೀರಾ ಅಗತ್ಯವಾಗಿ ಎಕ್ಸ್ಪೋಸ್ ಬೇಕೆಂದರೆ ಮಾಡಲು ಸಿದ್ಧ ಎನ್ನುತ್ತಾರೆ ಈ ನಟಿ.
ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶಗಳು ಸಿಕ್ಕಿದರೆ ಉತ್ತಮ ನಟಿಯಾಗಿ ಬೆಳೆಯಬಹುದು ಎಂಬುದು ಹರಿಪ್ರಿಯಾರ ಆಸೆ. ಸಿಗಲಿ ಎಂದು ಹಾರೈಸೊಣ.
|