ಕನ್ನಡ ಗಾಯಕರಿಗೆ ಕನ್ನಡ ಚಿತ್ರಗಳಲ್ಲಿ ಹಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಕನ್ನಡ ಗಾಯಕ-ಗಾಯಕಿಯರು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೆ ಹೊಸ ಸುದ್ದಿಯೊಂದು ಬಂದಿದೆ.
ಸಂಗೀತ ನಿರ್ದೇಶಕ ಹರಿಕಷ್ಣ ಅವರು ದರ್ಶನ್ ನಾಯಕರಾಗಿರುವ ಅರ್ಜುನ್ ಚಿತ್ರಕ್ಕೆ ಕನ್ನಡದ ಗಾಯಕಿಯರಾದ ಶಮಿತಾ ಮಲ್ನಾಡ್ ಹಾಗೂ ಚೈತ್ರಾರನ್ನು ಚೆನ್ನೈಗೆ ಕರೆಸಿಕೊಂಡು ಹಾಡಿಸಲಿದ್ದಾರೆ. ಕನ್ನಡ ಪ್ರತಿಭೆಗಳಿಗೆ ಆದ್ಯತೆ ನೀಡುವುದಾಗಿ ಈ ಮೊದಲೇ ಹೇಳಿದ್ದ ಹರಿ, ಈಗ ಮಾತು ಉಳಿಸಿಕೊಂಡಿದ್ದಾರೆ.
ಇದರಿಂದ ತಮಗೆ ದಕ್ಕಿದ ಈ ಮೊದಲ ಅನುಭವದಿಂದ ಶಮಿತಾ ಹಾಗೂ ಚೈತ್ರ ತುಂಬ ಖುಷಿಯಾಗಿದ್ದಾರಂತೆ. ಕನ್ನಡದ ಗಾಯಕರು ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಹರಿಕೃಷ್ಣರಂತ ಕೆಲ ಸಂಗೀತ ನಿರ್ದೇಶಕರು ತಮ್ಮ ಕನ್ನಡ ಪ್ರೀತಿ ಸದ್ದಿಲ್ಲದೆ ತೋರಿಸುತ್ತಿದ್ದಾರೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಹೊಸ ಬೆಳವಣಿಗೆಯಾಗಿದೆ.
|