ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಮ್ಮವರನ್ನೇ ಮರೆತ ಗೋಲ್ಡನ್ ಸ್ಟಾರ್  Search similar articles
MOKSHA
ಗಣೇಶ್‌ಗೆ ಗೋಲ್ಡನ್ ಸ್ಟಾರ್ ಪಟ್ಟ ತಂದುಕೊಟ್ಟ ಚಿತ್ರ ಮುಂಗಾರು ಮಳೆ. ಅದಾದ ಬಳಿಕ ಗಣೇಶ್ ಚಿತ್ರಣವೇ ಬದಲಾಗಿದೆ. ಚಿತ್ರ ಎರಡು ವರ್ಷ ಕಳೆದರೂ ಆ ಚಿತ್ರದ ಹಾಡು ಪುಟ್ಟ ಮಗುವಿನ ಬಾಯಲ್ಲಿ ಈಗಲೂ ಗುಂಯುಗುಟ್ಟುತ್ತಿದೆ.

ಅದು ಹಾಗಿರಲಿ. ಚಿತ್ರದ ಬಳಿಕ ಗಣೇಶ್ ಎಲ್ಲವನ್ನು ಮರೆತಿದ್ದಾರೆ ಎಂದಷ್ಟೇ ಅಲ್ಲ ತಮ್ಮ ಫ್ಯಾಮಿಲಿಯನ್ನು ಮರೆತಿದ್ದಾರೆ ಎಂದು ಇತ್ತೀಚೆಗೆ ಬೇಸರ ಪಟ್ಟವರು ಬೇರಾರೂ ಅಲ್ಲ ಮುಂಗಾರು ಮಳೆಯ ನಿರ್ಮಾಪಕ ಎ. ಕೃಷ್ಣಪ್ಪ. ಇತ್ತೀಚೆಗೆ ಮೊಗ್ಗಿನ ಮನಸು ಚಿತ್ರದ ಸಂದರ್ಭದಲ್ಲಿ ಈ ಬೇಸರವನ್ನು ಹೇಳಿಕೊಂಡರು.

ಗಣೇಶ್ ಮುಖದಲ್ಲೀಗ ಮುಂಚಿನ ಹಾವಭಾವ ಕಾಣುತ್ತಿಲ್ಲ. ಶ್ರೀಮಂತಿಕೆ, ಸಿನಿಮಾ ಅಟ್ಟಹಾಸದಲ್ಲಿ ತಮ್ಮವರನ್ನೇ ಮರೆಯುತ್ತಿದ್ದಾರೆ. ತಮ್ಮ ಪೋಷಕರ ನೋವನ್ನು ಅರ್ಥ ಮಾಡಿಕೊಳ್ಳುವಷ್ಟು ಟೈಮ್ ಅವರಿಗಿಲ್ಲ. ಗಣೇಶ್ ತಂದೆ ತಾಯಿ ಇವತ್ತಿಗೂ ಒಂದು ಬಾಡಿಗೆ ಮನೆಯಲ್ಲೇ ಇದ್ದಾರೆ. ಸಿನಿಮಾ ಅವರ ರಕ್ತಸಂಬಂಧಿಗಳನ್ನೆ ಮರೆಯುವಂತೆ ಮಾಡಿದೆ ಎಂದೆಲ್ಲಾ ಬೇಸರ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಇದು ಸತ್ಯವೋ ಸುಳ್ಳೋ ಅವರಿಬ್ಬರಿಗೆ ಮಾತ್ರ ಗೊತ್ತು.
ಮತ್ತಷ್ಟು
ಕನ್ನಡ ಗಾಯಕರಿಗೆ ಅವಕಾಶ
ವಿಷ್ಣುವಿನ ನಮ್‌ಯಜಮಾನ್ರು
ಗಂಭೀರ ಹುಡುಗಿ ಶುಭಾ ಪೂಂಜಾ
ಸಂಭಾಷಣೆಯಲ್ಲಿ ಹರಿಪ್ರಿಯಾ
ಮೆರವಣಿಗೆಗೆ ಸಿದ್ಧಗೊಂಡಿರುವ ಅಂಬಾರಿ
ಚಿತ್ರಮಂಡಳಿಯ ಸಮಸ್ಯೆಗಳಿಗೆ ಜಯಮಾಲಾ ಪರಿಹಾರವಾಗುವರೇ?