ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಿಂಚಿನ ಓಟಕ್ಕೀಗ ಮಿಂಚಿನ ಸಂಚಾರ  Search similar articles
MOKSHA
ಮಿಂಚಿನ ಓಟ ಈ ವಾರ ಬಿಡುಗಡೆಗೊಳ್ಳಲಿದೆ. ಈ ವಾರ ಮೂರು ಚಿತ್ರಗಳು ಬಿಡುಗಡೆಗೊಳ್ಳಲಿರುವುದರಿಂದ ಗುರುವಾರದಂದೇ ಚಿತ್ರ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಮೊದಲ ಬಾರಿಗೆ ಅಣ್ಣ ತಮ್ಮಂದಿರಿಬ್ಬರು ಒಟ್ಟಿಗೆ ಕಾಣಿಸಿಕೊಂಡು ಪ್ರೇಕ್ಷಕರು ತುದಿಗಾಲಲ್ಲಿ ನಿಲ್ಲಿಸಿದೆ.

ಈ ಓಟದಲ್ಲಿ ಸಖತ್ ಆಕ್ಷನ್ ದೃಶ್ಯಗಳಿವೆ. ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀ ಮುರಳಿ ಡ್ಯೂಪ್ ಸಹಾಯವಿಲ್ಲದೆ ಸಾಹಸ ಸನ್ನಿವೇಶಗಳಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕರು ಕೂರಿಸಿಕೊಂಡೇ ಕಾರನ್ನು ರೈಲಿಗೆ ಡಿಕ್ಕಿ ಹೊಡೆಸಿದ್ದು ಎಲ್ಲೆಡೆ ಸುದ್ದಿಯಾಗಿದೆ. ಅಲ್ಲದೆ, ನಾಯಕಿಗೆ ಯಕ್ಷಗಾನ ವೇಷ ಹಾಕಿದ್ದು, ಸೇರಿದಂತೆ ಹಲವು ವಿಚಾರಗಳು ಸುದ್ದಿಯಾಗುವಂತೆ ಮಾಡಿದೆ.

ಸೆನೈಡ್ ಚಿತ್ರದ ಬಳಿಕ ಕಮರ್ಷಿಯಲ್ ಚಿತ್ರದ ನಿರ್ದೇಶನಕ್ಕಿಳಿದಿರುವ ನಿರ್ದೇಶಕ ಎ.ಎಂ. ಆರ್. ರಮೇಶ್, ಮಿಂಚಿನ ಓಟಕ್ಕೆ ಕಥೆಯನ್ನು ಬರೆದಿದ್ದಾರೆ. ಕನ್ನಡಕ್ಕೊಂದು ಅಚ್ಚರಿಯ ಚಿತ್ರ ನೀಡಬೇಕೆನ್ನುವ ಉದ್ದೇಶ ಈ ಶ್ರಮದ ಹಿಂದಿದೆ. ಚಿತ್ರಕ್ಕೆ ಚಿತ್ರತಂಡದ ಎಲ್ಲಾ ಸದಸ್ಯರೂ ಯಶಸ್ಸಿಗಾಗಿ ದುಡಿದಿದ್ದಾರೆ. ಈಗ ಪ್ರೇಕ್ಷಕ ಚಿತ್ರದ ಫಲಿತಾಂಶ ನಿರ್ಧರಿಸಬೇಕಿದೆ. ಅದಕ್ಕಾಗಿ ಗುರುವಾರ ತನಕ ಕಾಯಬೇಕು.
ಮತ್ತಷ್ಟು
ತಮ್ಮವರನ್ನೇ ಮರೆತ ಗೋಲ್ಡನ್ ಸ್ಟಾರ್
ಕನ್ನಡ ಗಾಯಕರಿಗೆ ಅವಕಾಶ
ವಿಷ್ಣುವಿನ ನಮ್‌ಯಜಮಾನ್ರು
ಗಂಭೀರ ಹುಡುಗಿ ಶುಭಾ ಪೂಂಜಾ
ಸಂಭಾಷಣೆಯಲ್ಲಿ ಹರಿಪ್ರಿಯಾ
ಮೆರವಣಿಗೆಗೆ ಸಿದ್ಧಗೊಂಡಿರುವ ಅಂಬಾರಿ