ತಮ್ಮ ಮುದ್ದಿನ ಪುತ್ರರಿಗಾಗಿ ಹಲವು ನಟರು ನಿರ್ಮಾಪಕರಾಗುತ್ತಾರೆ ಅಂಥವರಲ್ಲಿ ಹಿರಿಯ ಶ್ರೀನಿವಾಸ ಮೂರ್ತಿ ಒಬ್ಬರು. ತಮ್ಮ ಮಗ ನವೀನ್ ಕೃಷ್ಣನಿಗಾಗಿ ಧಿಮಾಕು ಮಾಡಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಶ್ರೀರಸ್ತು ಶುಭಮಸ್ತು ಚಿತ್ರದಲ್ಲಿ ಉತ್ತಮ ಅಭಿನಯದ ಮೂಲಕ ಜನತೆ ಗುರುತಿಸಿದರಾದರೂ, ಪ್ರೇಕ್ಷಕ ಬಹುಬೇಗ ಮರೆತ. ಕದಂಬ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರೂ, ಚಿತ್ರ ಗೆಲ್ಲದೆ ಅಲ್ಲಿಯೂ ಅದೃಷ್ಟ ಕೈಕೊಟ್ಟಿತು. ಈಗ ಸ್ವತ ತಂದೆಯ ನಿರ್ಮಾಣದಲ್ಲಿ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ವಿಶಿಷ್ಟ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ನವೀನ್ ಕೃಷ್ಣ, ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಕಥೆಯನ್ನು ಇಟ್ಟುಕೊಂಡು ಬರುತ್ತಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಹಾಡುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ರಂಗಭೂಮಿ ಹಿನ್ನೆಲೆಯ ಮಗೇಶ್ ಚಿತ್ರದ ನಿರ್ದೇಶಕರು. ಚಿತ್ರದ ಡಿಟಿಎಸ್ ಕೆಲಸ ಪೂರ್ಣಗೊಂಡಿದ್ದು, ತೆರೆಗೆ ಸಿದ್ದವಾಗಿದೆ. ಕೃಷ್ಣ ಅದೃಷ್ಟ ಸಧ್ಯದಲ್ಲಿಯೇ ಎದುರಾಗಲಿದೆ.
|