ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿರೀಕ್ಷೆಯಲ್ಲಿ ಚಿಕ್ಕಮಗಳೂರ ಚಿಕ್ಕಮಲ್ಲಿಗೆ  Search similar articles
MOKSHA
ಕರಿಮಲೆಯ ಕಗ್ಗತ್ತಲು ಚಿತ್ರದ ನಿರ್ದೇಶನದಿಂದ ಹಲವರ ಪ್ರಶಂಸೆಗೆ ಪಾತ್ರವಾಗಿದ್ದ ನಿರ್ದೇಶಕ ಚನ್ನಗಂಗಪ್ಪ ಬಳಿಕ ನನ್ನಾಸೆಯ ಹೂವೇ ಹಾಗೂ ಸೌಂದರ್ಯ ಚಿತ್ರ ಮಾಡಿದರು. ಆದರೂ ಯಾಕೋ ಪ್ರೇಕ್ಷಕ ವರ್ಗಕ್ಕೆ ಇಷ್ಟವಾಗಿಲ್ಲ. ಈಗ ಇವರ ನಿರ್ದೇಶನದ ಇನ್ನೊಂದು ಚಿತ್ರ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಬಿಡುಗಡೆಗೆ ಸಿದ್ದಗೊಂಡಿದೆ.

ದಶಕಗಳ ಹಿಂದಿನ ರಾಜಮನೆತನ ಸ್ವತಂತ್ರ ಭಾರತದ ಅವಧಿಯಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತದೆ. ಆದರೆ ಮನೆತನದ ಹಿರಿಯರು ವಾಸ್ತವವನ್ನು ಒಪ್ಪಿಕೊಳ್ಳದೆ ಹಳೆಯ ವೈಭವದ ಗುಂಗಿನಲ್ಲೇ ಇರುತ್ತಾನೆ. ಆತನ ಮೊಮ್ಮಗಳೇ ಮನೆತನದ ಕೊನೆಯ ಕೊಂಡಿ. ಹೀಗೆ ಇವರಿಬ್ಬರ ನಡುವೆ ಕತೆ ಸಾಗುತ್ತದೆ.

ರಾಜಮನೆತನದ ಹಿರಿಯ ಪಾತ್ರದಲ್ಲಿ ನಟ ಸಿ.ಆರ್. ಸಿಂಹ ನಟಿಸುತ್ತಿದ್ದಾರೆ. ಅಕ್ಕನ ಬೆನ್ನ ಹಿಂದೆ ಬಂದ ರಾಧಿಕಾ ಗಾಂಧಿ ಚಿತ್ರ ನಾಯಕಿ. ಪೂಜಾ ಗಾಂಧಿ ಮೊದಲ ಚಿತ್ರವೇ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದ ಬಳಿಕ ಎಲ್ಲರ ಮನ್ನಣೆಗೆ ಪಾತ್ರವಾಗಿದ್ದ ನಟಿಯ ತಂಗಿ ಈಗ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ಈಕೆಯ ಚಿತ್ರದ ಬಗ್ಗೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಚಿತ್ರಕತೆಯೊಂದಿಗೆ ಹೊಸಬರನ್ನು ಹಾಕಿಕೊಂಡು ಸಾಕಷ್ಟು ಪ್ರಯೋಗಗಳೊಂದಿಗೆ ಚಿತ್ರ ಸಿದ್ದಗೊಂಡಿದೆ.
ಮತ್ತಷ್ಟು
ಯಶಸ್ಸಿನ ನಿರೀಕ್ಷೆಯಲ್ಲಿ ಹರ್ಷ
ಭರದಿಂದ ಸಾಗಿರುವ 'ಪ್ರೀತಿಯ ತೇರು'
ಪುತ್ರನಿಗಾಗಿ 'ಧಿಮಾಕು'
ಮಿಂಚಿನ ಓಟಕ್ಕೀಗ ಮಿಂಚಿನ ಸಂಚಾರ
ತಮ್ಮವರನ್ನೇ ಮರೆತ ಗೋಲ್ಡನ್ ಸ್ಟಾರ್
ಕನ್ನಡ ಗಾಯಕರಿಗೆ ಅವಕಾಶ