ಮಳೆ ರೈತರಿಗಷ್ಟೇ ಮುಖ್ಯವಲ್ಲ. ಇದಕ್ಕಾಗಿ ಚಿತ್ರರಂಗವೂ ಕಾಯುತ್ತಿದೆ ಎಂದರೆ ಆಶ್ಚರ್ಯವಿಲ್ಲ. ನಿರ್ದೇಶಕಿ ವಿಜಯಲಕ್ಷ್ಮೀ ತಮ್ಮ ಮುಂದಿನ ಚಿತ್ರಕ್ಕಾಗಿ ಮಳೆಯನ್ನು ಅವಲಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆಗಾಗಿ ದಿನಾ ಪ್ರಾರ್ಥಿಸುತ್ತಿದ್ದಾರಂತೆ.
ಈ ಬಂಧನ ಚಿತ್ರದ ಮೂಲಕ ನಿರ್ದೇಶನಕ್ಕಿಳಿದ ವಿಜಯಲಕ್ಷ್ಮೀ ಈಗ ಇನ್ನೊಂದು ಚಿತ್ರದ ತಯಾರಿಯಲ್ಲಿದ್ದಾರೆ. ಈಗಾಗಲೇ ಚಿತ್ರದ ಕತೆ ಸಿದ್ದವಾಗಿದೆ. ಸಂಭಾಷಣೆಯ ವರ್ಷನ್ ಸಿದ್ದತೆ ಹಂತದಲ್ಲಿದೆ. ಎರಡೂ ಸಂಪೂರ್ಣ ರೆಡಿಯಾದಾಗಲೇ ಸಿನಿಮಾದ ಒಂದು ನೀಲನಕ್ಷೆ ಸಿದ್ದಗೊಳ್ಳಲಿದೆ ಎಂದೆಲ್ಲಾ ತಿಳಿಸಿದರು ವಿಜಯಲಕ್ಷ್ಮೀ. ಆದರೆ ಚಿತ್ರದ ಹೆಸರು ಇನ್ನೂ ಫೈನಲ್ ಆಗಿಲ್ಲ.
ಕೌಟುಂಬಿಕ ಚಿತ್ರ ಮಾಡಿದ ಬಳಿಕ ಈಗ ಹೊಸ ಚಿತ್ರವನ್ನು ಯೂತ್‌ಗಾಗಿ ಮೀಸಲಿಟ್ಟಿದ್ದಾರೆ. ಈ ಬಂಧನದ ತಂತ್ರಜ್ಞರೇ ಇಲ್ಲೂ ಕೆಲಸ ಮಾಡುತ್ತಿದ್ದಾರೆ. ಎಲ್ಲವೂ ಸಿದ್ದವಾದ ಮೇಲೆ ನಾಯಕರನ್ನು ಹಾಕಿಕೊಳ್ಳುವ ಕುರಿತು ಯೋಜನೆ ಚಿಂತನೆ ನಡೆಸಿದ್ದಾರೆ. ಈಗಾಗಲೇ ಮಿಲನದ ನಾಯಕಿ ಪಾರ್ವತಿ ಮೆನನ್ ಬಳಿ ಮಾತುಕತೆಯಾಗಿದ್ದು, ಸಕರಾತ್ಮಕ ಪ್ರತಿಕ್ರಿಯೆ ಬಂದಿದೆ. ಒಟ್ಟಿನಲ್ಲಿ ಬಹುನಿರೀಕ್ಷೆ ಇಟ್ಟುಕೊಂಡಿರುವ ವಿಜಯಲಕ್ಷ್ಮೀಗೆ ಇಲ್ಲಿಯಾದರೂ ವಿಜಯ ಸಿಗಲಿ ಎಂದು ಹಾರೈಸೋಣ ಅಲ್ಲವೇ.
|