ಪ್ರೀತಿ ತುಂಬಿದ ಪ್ರತಿ ಗೂಡು ಅರಮನೆ ಈಗ ಶತದಿನದತ್ತ ದಾಪುಗಾಲಿಡುತ್ತಿದೆ. ಗೋಲ್ಡನ್ ಗಣೇಶ್ ಅವರ ಈ ಚಿತ್ರ ಶತದಿನೋತ್ಸವವನ್ನು ಆಚರಿಸುವುದರೊಂದಿಗೆ ಸತತ ಏಳನೇ ಚಿತ್ರವೂ 100ರ ಗಡಿ ದಾಟುವ ಕನಸು ಚಿತ್ರತಂಡಕ್ಕಿದೆ. ಹಾಗಾಗಿ ಅರಮನೆ ಶತದಿನೋತ್ಸವವನ್ನು ತುಸು ಭಿನ್ನವಾಗಿ ಆಚರಿಸುವ ಯೋಜನೆ ಸಿದ್ದವಾಗುತ್ತಿದೆಯಂತೆ.
ನಿರ್ದೇಶಕ ನಾಗಶೇಖರ್ ತುಂಬಾ ಖುಷಿಯಲ್ಲಿದ್ದಾರೆ. ಚಿತ್ರಮಂದಿರ ಈಗಲೂ ಫ್ಯಾಮಿಲಿ ಪ್ರೇಕ್ಷಕರಿಂದ ತುಂಬುತ್ತಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಚಿತ್ರ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದರಿಂದ ಅರಮನೆ ಶತದಿನ ಕಾಣುವುದರಲ್ಲಿ ಸಂಶಯವಿಲ್ಲ ಎಂಬುದು ಅವರ ಅಭಿಪ್ರಾಯ.
ಈಗ ನಾಗಶೇಖರ್ ಇನ್ನೊಂದು ಯಶಸ್ವಿ ಚಿತ್ರ ಕೊಡುವ ಸನ್ನದ್ದದಲ್ಲಿದ್ದಾರೆ. ಅದಕ್ಕಾಗಿ ಮನೆ ಮೂಲೆಯೊಂದರಲ್ಲಿ ಕುಳಿತು ಚಿತ್ರದ ಸ್ಕ್ರಿಪ್ ಸಿದ್ದಪಡಿಸುತ್ತಿದ್ದಾರೆ. ಇದು ಕೂಡ ಗಣೇಶ್‌ಗಾಗಿಯಂತೆ. ಚಿತ್ರದ ನಿರ್ಮಾಪಕರಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
|