ಗಾಳಿಪಟದಲ್ಲಿ ಬೋಲ್ಡ್ ನಟಿಯಾಗಿ ಕಾಣಿಸಿಕೊಂಡ ಭಾವನಾ ರಾವ್ ಈಗ ಗಗನಸಖಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜು ನಿರ್ದೇಶಿಸುತ್ತಿರುವ ಮುಂದಿನ ಚಿತ್ರ ಗಗನಸಖಿಗೆ ಭಾವನ ನಾಯಕಿ.
ಗಗನಸಖಿಯನ್ನು ನಿರ್ಮಿಸುತ್ತಿರುವ ನಿಶಾಂತ್, ಈ ಮೊದಲು ಧಾರವಾಹಿ ಮಾಡೋದಕ್ಕೆ ಹೊರಟಿದ್ದರಂತೆ. ಕೊನೆಗೆ ಅವೆಲ್ಲವನ್ನೂ ಕೈಬಿಟ್ಟು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇನ್ನೊಂದೆರಡು ತಿಂಗಳಲ್ಲಿ ಚಿತ್ರ ಪ್ರಾರಂಭಗೊಂಡು ಆರು ತಿಂಗಳೊಳಗೆ ಬಿಡುಗಡೆ ಮಾಡುವ ಸನ್ನದ್ಧದಲ್ಲಿದ್ದಾರೆ.
ಆತ್ಮೀಯದಲ್ಲಿ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಅಕುಲ್ ಬಾಲಾಜಿಗೆ ಮೊದಲ ಚಿತ್ರ ಹೆಚ್ಚೇನು ಯಶಸ್ಸು ಗಳಿಸಿಲ್ಲ. ಬಂದಷ್ಟೇ ವೇಗವಾಗಿ ಚಿತ್ರಮಂದಿರದಿಂದ ಹೊರನಡೆದಿದೆ. ಆದರೆ ಇವರಿಗೆ ಅವಕಾಶಗಳಿಗೇನೂ ಕಡಿಮೆಯಾಗಿಲ್ಲ. ಗಗನಸಖಿಯಲ್ಲಿ ಮತ್ತೊಮ್ಮೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
|