ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುಮನಾ ಕಿತ್ತೂರು ಎದೆಗಾರಿಕೆ
ಸುದ್ದಿ/ಗಾಸಿಪ್
Feedback Print Bookmark and Share
 
MOKSHA
ಸ್ಲಂಬಾಲ ಚಿತ್ರ ಇನ್ನು ತೆರೆಕಂಡಿಲ್ಲ. ಪ್ರಥಮ ಚಿತ್ರ ತೆರೆಕಾಣುವ ಮುನ್ನವೇ ನಿರ್ದೇಶಕಿ ಸುಮನಾ ಕಿತ್ತೂರು ಮತ್ತೆರಡು ಚಿತ್ರಗಳ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಸ್ಲಂಬಾಲ ಚಿತ್ರ ನಿರ್ಮಿಸಿದ್ದ ಮೇಘಾ ಮೂವೀಸ್ ನಿರ್ಮಿಸುತ್ತಿರುವ ಎದೆಗಾರಿಕೆ ಚಿತ್ರವನ್ನು ಸುಮನಾ ಕಿತ್ತೂರು ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕತೆಯನ್ನು ಅಗ್ನಿಶ್ರೀದರ್ ಒದಗಿಸಿಕೊಟ್ಟಿದ್ದಾರೆ. ನಾಯಕ-ನಾಯಕಿ ಸೇರಿದಂತೆ ಇನ್ನಿತರ ತಾಂತ್ರಿಕ ವರ್ಗದ ಆಯ್ಕೆ ಇನ್ನು ಅಂತಿಮಗೊಂಡಿಲ್ಲ.

ಆದಾದ ಬಳಿಕ ಅವರ ನಿರ್ದೇಶನದ ಮೂರನೇ ಚಿತ್ರವನ್ನೂ ಮೇಘ ಮೂವಿಸ್ ಸಂಸ್ಥೆಯೇ ನಿರ್ಮಿಸಲಿದೆ. ಸ್ಕ್ರಿಪ್ಟ್ ಕೂಡ ಶ್ರೀಧರ್ ಅವರದ್ದೇ. ಈಗಾಗಲೇ ಹಲವು ಕಡೆಗಳಿಂದ ನಿರ್ದೇಶನಕ್ಕಾಗಿ ಆಫರ್‌ಗಳು ಬರುತ್ತಿದ್ದರೂ, ಅವುಗಳನ್ನೆಲ್ಲಾ ನಿರಾಕರಿಸಿರುವ ಸುಮನ್ ಈ ಎರಡು ಚಿತ್ರಗಳನ್ನು ನಿರ್ದೇಶಿಸಿದ ಬಳಿಕವೇ ಬೇರೆ ಬ್ಯಾನರ್ ಗಳತ್ತ ಚಿತ್ತ ಹಾಯಿಸುತ್ತೇನೆ ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಂಬಾಲ ಸುಮನಾ ಕಿತ್ತೂರು ಎದೆಗಾರಿಕೆ