ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಜು ಅನಂತಸ್ವಾಮಿ ಮರಳಿ ನಟನೆಗೆ
ಸುದ್ದಿ/ಗಾಸಿಪ್
Feedback Print Bookmark and Share
 
ಸುನೀಲ್ ಕುಮಾರ್ ದೇಸಾಯಿಯವರ ಸರಿಗಮ ಚಿತ್ರದ ಮೂಲಕ ಚಿತ್ರರಂಗದಿಂದ ಕೆಲ ಸಮಯ ದೂರವಿದ್ದ ಕಲಾವಿದರು ಮತ್ತೆ ನಟನೆಗೆ ಮರಳುತ್ತಿದ್ದಾರೆ. ಈಗಾಗಲೇ ಸುನೀಲ್ ರಾವ್ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಮತ್ತೊಬ್ಬರ ಸರದಿ. ಗಾಯಕ ರಾಜು ಅನಂತಸ್ವಾಮಿ ಕೂಡಾ ದೇಸಾಯಿಯವರ ಸರಿಗಮ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಹಿಂದೆ ಇವರು ಜಾಕ್‌ಪಾಟ್ ಹಾಗೂ ಅಮೃತಧಾರೆ ಚಿತ್ರಗಳಲ್ಲಿ ನಟಿಸಿದ್ದರು. ಆದರೆ ನಂತರ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಈಗ ಇಳೆಯರಾಜ ಸಂಗೀತ, ದೇಸಾಯಿ ನಿರ್ದೇಶನದ ಚಿತ್ರದಲ್ಲಿ ನಟಿಸಲು ಖುಷಿಯಾಗುತ್ತಿದೆ ಎನ್ನುತ್ತಾರೆ. ರಾಜು ಕಳೆದ ತಿಂಗಳವರೆಗೂ ಅಮೆರಿಕಾದಲ್ಲಿದ್ದರು.

ಅಮೆರಿಕಾದಲ್ಲಿ ಸುಮಾರು 15ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿ ಬಂದಿದ್ದಾರೆ. ಮೈಸೂರಿನ ನನ್ನ ಶಾಲೆ ಶಾಂತಿನಿಕೇತನದಲ್ಲಿ ಕಳೆದೆಡರು ವರ್ಷಗಳಿಂದ ಸಂಗೀತ ಪಾಠ ನಡೆಸುತ್ತಿದ್ದೇನೆ. ಈಗ ಬೆಂಗಳೂರಿನಲ್ಲಿಯೂ ಆರಂಭಿಸಬೇಕು. ಶೈಕ್ಷಣಿಕ ವಿಭಾಗದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವ ಅಭಿಲಾಷೆ ಇದೆ ಎನ್ನುತ್ತಾರೆ ರಾಜು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುನೀಲ್ ಕುಮಾರ್ ದೇಸಾಯಿ, ಸರಿಗಮ, ಸುನೀಲ್ ರಾವ್, ರಾಜು ಅನಂತಸ್ವಾಮಿ