ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನವಯುವಕರನ್ನೂ ನಾಚಿಸುವ 'ಶಿವಣ್ಣ'
ಸುದ್ದಿ/ಗಾಸಿಪ್
Feedback Print Bookmark and Share
 
MOKSHA
'ಶಿವಣ್ಣ ಅವರ ಉತ್ಸಾಹವನ್ನು ನಿಜಕ್ಕೂ ಮೆಚ್ಚಲೇ ಬೇಕು' ಎಂದರು ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ. ಪ್ರಸ್ತುತ ಅವರು ಶಿವರಾಜ್ ಕುಮಾರ್ ಅಭಿನಯದ 'ಹೊಡಿಮಗ' ಚಿತ್ರಕ್ಕೆ ಸಾಹಸ ಸಂಯೋಜಿಸುತ್ತಿದ್ದಾರೆ.

ಶಿವಣ್ಣನ ಉತ್ಸಾಹ ನೋಡಿದರೆ ಖುಷಿಯಾಗುತ್ತದೆ. ಈಗಲೂ ಅವರು 20ರ ಯುವಕರು ನಾಚುವಂತೆ ಫೈಟ್ ಮಾಡುತ್ತಾರೆ. ಹೊಸ ರೀತಿಯ ಸ್ಟಂಟ್ಸ್‌ಗಳನ್ನು ತಾಳ್ಮೆಯಿಂದ ಕಲಿಯುತ್ತಾರೆ ಎಂದು ಹೊಗಳುತ್ತಾರೆ ಡ್ಯಾನಿ. ಚಿತ್ರಕ್ಕಾಗಿ ಹೆಬ್ಬಾಳದ ಬಳಿ ಕೆಲಸ ಮಾಡುತ್ತಿದ್ದಾರೆ.

ಪುನೀತ್‌ರ 'ರಾಜ್' ಚಿತ್ರಕ್ಕಾಗಿ ಡ್ಯಾನಿ ವಿಶಿಷ್ಟ 'ಸ್ಮೌಕ್ ಫೈಟ್' ಸಂಯೋಜಿಸಿದ್ದಾರೆ. ಮೈಸೂರು ಲ್ಯಾಂಪ್ಸ್ ಆವರಣದಲ್ಲಿ ಚಿತ್ರಿಸಿರುವ ಹಾಲಿವುಡ್ ಶೈಲಿಯ ಈ ಸ್ಟಂಟ್ಸ್‌ಗಳು ಕನ್ನಡದಲ್ಲಿ ಹೊಸ ಪ್ರಯೋಗ ಎನ್ನುತ್ತಾರೆ ಅವರು. ಹರ್ಷ ನಿರ್ದೇಶನದ 'ಬಿರುಗಾಳಿ' ಚಿತ್ರಕ್ಕೂ ಮೂರು ವಿಭಿನ್ನ ಶೈಲಿಯ ಸ್ಟಂಟ್ಸ್ ಮಾಡಿದ್ದಾರೆ.

ಕನ್ನಡದ 'ದುನಿಯಾ' ಚಿತ್ರವನ್ನು ನಿರ್ದೇಶಕ ವಿ.ಸಮುದ್ರ ತೆಲುಗು ತಮಿಳಿಗೆ ರಿಮೇಕ್ ಮಾಡುತ್ತಿದ್ದಾರೆ. ಇದಕ್ಕೂ ಡ್ಯಾನಿ ಸಾಹಸ ಸಂಯೋಜಿಸುತ್ತಿದ್ದಾರೆ. ನಂತರ ವಿಜಯ್‌ರ 'ತಾಕತ್', ಶಿವಣ್ಣನ 'ಭಾಗ್ಯದ ಬಳೆಗಾರ' ಚಿತ್ರಗಳಿಗೆ ಕೆಲಸ ಮಾಡಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿವರಾಜ್ ಕುಮಾರ್, ಹೊಡಿಮಗ, ಡಿಫರೆಂಟ್ ಡ್ಯಾನಿ