ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಥ್ರಿಲ್ ನೀಡುವ 'ಜಾಲ'
ಸುದ್ದಿ/ಗಾಸಿಪ್
Feedback Print Bookmark and Share
 
ಥ್ರಿಲ್ಲರ್ ಚಿತ್ರಗಳು ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ನೀಡಬೇಕು. ಆದರೆ ಕೆಲವು ಚಿತ್ರಗಳು ಇದರಲ್ಲಿ ವಿಫಲವಾಗುತ್ತವೆ. ಆದರೆ ನಮ್ಮ ಚಿತ್ರದಲ್ಲಿ ಆ ರೀತಿ ಆಗುವುದಿಲ್ಲ. ಪ್ರೇಕ್ಷಕನಿಗೆ ವಿಶಿಷ್ಟ ಅನುಭವ ಆಗುತ್ತದೆ ಎಂದರು ಜಾಲ ಚಿತ್ರದ ನಿರ್ದೇಶಕ ನಾಗನಾಥ ಜೋಶಿ.

ಟಿ.ಎನ್. ಸೀತಾರಾಂ ಗರಡಿಯಲ್ಲಿ ಪಳಗಿದ ನಾಗನಾಥ್ ಜೋಶಿ ಹಲವಾರು ಕಿರುತೆರೆಗಳನ್ನು ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ. ಹಿರಿತೆರೆಯನ್ನು ಜಯಿಸಬೇಕೆಂದು ಚಿತ್ರನಿರ್ದೇಶನ ಮಾಡಲು ಮುಂದೆ ಬಂದಿದ್ದಾರೆ.

ಮೂರು ಜೋಡಿಗಳು ಕಾಡಿನಲ್ಲಿ ಕಳೆದು ಹೋಗುತ್ತಾರೆ. ಅಲ್ಲಿ ಪೀತಿ ಇರುತ್ತದೆ. ಮರ್ಡರ್‌ಗಳು ಕೂಡಾ ಇರುತ್ತವೆ. ಕೊಲೆಗೆ ಕಾರಣಗಳು ತಿಳಿಯುವುದಿಲ್ಲ. ಚಿತ್ರದ ಅಂತ್ಯದಲ್ಲಿ ಯಾಕೆ ಕೊಲೆ ನಡೆಯಿತು ಎಂಬುದನ್ನು ತೋರಿಸಲಾಗುತ್ತದೆ ಎಂದು ತಮ್ಮ ಚಿತ್ರದ ಬಗ್ಗೆ ವಿವರಿಸಿದರು ಜೋಶಿ. ತಾರಾಗಣದಲ್ಲಿ ಚೇತನ್, ದೀಪು, ಪದ್ಮಿನಿ, ಪೂರ್ವಿ, ಅರವಿಂದ್, ಶ್ರೀನಿವಾಸ್ ಹಾಗೂ ಕೀರ್ತಿ ಅಭಿನಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾಲ ನಾಗನಾಥ ಜೋಶಿ ಟಿಎನ್ ಸೀತಾರಾಂ