ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೀರೋ ಪಟ್ಟ ಗಿಟ್ಟಿಸಿಕೊಂಡ ಯಶ್‌ಗೆ ಈಗ ಅನೇಕ ಆಫರ್‌ಗಳು ಬರುತ್ತಿವೆ. ಆದರೆ ಅವರು ಬ್ಯುಸಿಯಾಗಿದ್ದಾರೆ.
ಇತ್ತೀಚೆಗೆ ಹೊಸಬರ ಚಿತ್ರಗಳು ಯಾಕೆ ಸೋಲುತ್ತವೆ ಎಂಬುದರ ಬಗ್ಗೆ ಯಶ್ ಮುಕ್ತವಾಗಿ ಮಾತನಾಡುತ್ತಾರೆ. ಸಿನಿಮಾ ಕೆಲಸ ಎಂದರೆ ಅದು ನಿರ್ದೇಶಕನೊಬ್ಬನ ಮೇಲೆ ಹೊರಿಸುವ ತೂಕದ ಚೀಲವಲ್ಲ, ನಿರ್ಮಾಪಕ, ನಾಯಕ, ನಾಯಕಿ ಹೀಗೆ ಎಲ್ಲರೂ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ಕರ್ಮಭೂಮಿ. ಇಲ್ಲಿ ಕೆಲಸ ವಿಕೇಂದ್ರಿಕರಣವಾಗಬೇಕು ಎನ್ನುತ್ತಾರೆ ಯಶ್.
ನಾಯಕ ಎಂದಾಕ್ಷಣ ಆತ ದೇವ ಲೋಕದಿಂದ ಬಂದ ಮನುಷ್ಯನಲ್ಲ. ಆತ ಕೂಡಾ ಸಾಮಾನ್ಯ ವ್ಯಕ್ತಿ ಎಂದು ತಿಳಿದುಕೊಂಡಿರುವವನು ನಾನು. ಆದ್ದರಿಂದಲೇ ರಾಖಿ ಚಿತ್ರದ ಪೋಸ್ಟರ್ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಕೆಲಸ ಮಾಡಿದ್ದೇನೆ ಎಂದು ನೇರವಾಗಿ ಹೇಳಿದರು ಯಶ್. ಎಲ್ಲ ನಾಯಕರು ಇಂತಹ ಬುದ್ದಿ ಬೆಳೆಸಿಕೊಂಡರೆ ಉತ್ತಮ.