'ಸಂಬಂಧಗಳ ಸೂಕ್ಷ್ಮ ನೆಲೆಗಳ ಬಗ್ಗೆ ವಿಮುಕ್ತಿ ಚರ್ಚೆ ಮಾಡಲಿದೆ. ಅಸಂಗತ ಸಂಬಂಧಗಳನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ಮಗಳು ತಂದೆಯನ್ನು ಅಗತ್ಯಕ್ಕಿಂತ ಹೆಚ್ಚು ಹಚ್ಚಿಕೊಳ್ಳುವ ಸನ್ನಿವೇಶಗಳು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ' ಎಂದರು ವಿಮುಕ್ತಿ ಚಿತ್ರದ ನಿರ್ದೇಶಕ ಪಿ.ಶೇಷಾದ್ರಿ.
ಇದೊಂದು ವಿಭಿನ್ನ ಚಿತ್ರವಾಗಿದ್ದು, ಗಂಡು ಹೆಣ್ಣಿನ ಸಂಬಂಧದ ಸಂಕೀರ್ಣತೆಯನ್ನು ತೀರಾ ಭಿನ್ನ ನೆಲೆಯೊಂದರ ಮೂಲಕ ಪರಿಚಯಿಸುವ ಪ್ರಯತ್ನ ನಡೆಸಲಾಗಿದೆ ಎಂದು ಚಿತ್ರದ ಹಂದರ ಬಿಚ್ಚಿಟ್ಟರು ಶೇಷಾದ್ರಿ.
ಚಿತ್ರ ತಂದೆ-ಮಗಳ ನಡುವೆ ಸುತ್ತುತ್ತದೆಯಂತೆ. ಚಿತ್ರಕ್ಕೆ ಎಸ್.ರಾಮಚಂದ್ರ ಅವರ ಛಾಯಾಗ್ರಹಣವಿದ್ದು, ಪ್ರವೀಣ್ ಗೋಡ್ಕಿಂಡಿ ಸಂಗೀತ ಹಾಗೂ ಕೆಂಪರಾಜು ಅವರ ಸಂಕಲನವಿದೆ. ತಾರಾಗಣದಲ್ಲಿ ರಾಮಕೃಷ್ಣ, ಭಾವನಾ, ಅರವಿಂದ್, ಸಾನಿಯಾ ಹೋದಾ (ಇರಾನ್ ನಟಿ) ಇದ್ದಾರೆ.