ಸಿಕ್ಸರ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ನಾಯಕನ ಪಟ್ಟ ಗಿಟ್ಟಿಸಿದ ಪ್ರಜ್ಚಲ್‌ಗೆ ಉತ್ತಮ ಓಪನಿಂಗ್ ಸಿಕ್ಕಿದೆ ಎಂದರೆ ತಪ್ಪಾಗಲಾರದು. ಅವರ ಚಿತ್ರಗಳು ಹೇಳುವಂತಹ ಯಶ ಕಾಣದಿದ್ದರು, ಅವರು ನಾಯಕರಾಗಿರುವ ಚಿತ್ರಗಳು ತಿಂಗಳಿಗೆ ಎರಡಾದರೂ ಸೆಟ್ಟೇರುತ್ತವೆ.
ಮೊನ್ನೆ ತಾನೆ ದೇಸಾಯಿ ನಿರ್ದೇಶನದ ಪ್ರಜ್ವಲ್ ನಾಯಕರಾಗಿರುವ 'ಸರಿಗಮ' ಚಿತ್ರ ಸೆಟ್ಟೇರಿತು. ಈಗ 'ಜೀವ' ಎಂಬ ಹೊಸ ಚಿತ್ರಕ್ಕೂ ಪ್ರಜ್ವಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದೇ 23 ರಿಂದ ಚಿತ್ರೀಕರಣ ಆರಂಭವಾಗಲಿದೆ.
'ಜಾಲಿಡೇಸ್' ಚಿತ್ರದಲ್ಲಿ ಅಭಿನಯಿಸಿರುವ ಋತ್ವ ನಾಯಕಿ. ಪಲ್ಲಕ್ಕಿ ಚಿತ್ರದಲ್ಲಿ ಕಣ್ಣಲ್ಲೂ ನೀನೇನೇ ಹಾಡಿಗೆ ನೃತ್ಯ ಸಂಯೋಜಿಸಿದ್ದ ಪ್ರಭು ಶ್ರೀನಿವಾಸ್ ಚಿತ್ರದ ನಿರ್ದೇಶಕರು. ಜೀವ ಒಂದು ಯೂತ್ ಸ್ಟೋರಿ ಎನ್ನುತ್ತಾರೆ ಪ್ರಜ್ವಲ್.