ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರ್ದೇಶನದತ್ತ ಪ್ರಕಾಶ್ ಬೆಳವಾಡಿ
ಸುದ್ದಿ/ಗಾಸಿಪ್
Feedback Print Bookmark and Share
 
ರಂಗಭೂಮಿ ಹಾಗೂ ಕಿರುತೆರೆ ನಿರ್ದೇಶಕ ಪ್ರಕಾಶ್ ಬೆಳವಾಡಿ ಸಿನಿಮಾ ನಿರ್ದೇಶಿಸುವ ಸೂಚನೆ ನೀಡಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಸಿದ್ಧವಾಗುತ್ತಿದ್ದು, ಇನ್ನೆರಡು ತಿಂಗಳಿನಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ.

ಸದ್ಯ ಪ್ರಕಾಶ್ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಿರ್ದೇಶನದ 'ಇಲ್ಲಿರುವುದು ಸುಮ್ಮನೆ' ಧಾರವಾಹಿ ಕಿರುತೆರೆ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ. 'ಗರ್ವ' ನಂತರ ಮತ್ತೊಂದು ವಿಶಿಷ್ಟ ಧಾರಾವಾಹಿ ಮೂಲಕ ಕಿರುತೆರೆಗೆ ಮರಳಿರುವ ಪ್ರಕಾಶ್‌ಗೂ ನಟನೆಯ ಆಹ್ವಾನವಿದೆ.

ಟಿ.ಎನ್.ಸೀತಾರಾಂ ನಿರ್ದೇಶನದ 'ಮತದಾನ' ಚಿತ್ರದಲ್ಲಿ ಪ್ರಕಾಶ್ ಗಮನ ಸೆಳೆಯುವ ಪಾತ್ರ ಮಾಡಿದ್ದರು. ಉತ್ತಮ ಪಾತ್ರವಿದ್ದರೆ, ಮನಸ್ಸಿಗೆ ಹಿತವೆನಿಸಿದರೆ ಮಾತ್ರ ಸಿನಿಮಾ ಅಭಿನಯ ಓಕೆ ಎನ್ನುತ್ತಾರೆ ಪ್ರಕಾಶ್ ಬೆಳವಾಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿರ್ದೇಶಕ, ಪ್ರಕಾಶ್ ಬೆಳವಾಡಿ, ಇಲ್ಲಿರುವುದು ಸುಮ್ಮನೆ, ಗರ್ವ, ಮತದಾನ