'ತಾಜ್ಮಹಲ್' ಚಿತ್ರದಲ್ಲಿ ಪಾತ್ರವೊಂದನ್ನು ಮಾಡಿದ ಅದರ ನಿರ್ಮಾಪಕರಲ್ಲೊಬ್ಬರಾದ ಅಶೋಕ್ ಕುಮಾರ್‌ಗೆ ಈಗ ನಾಯಕತ್ವದ ಅವಕಾಶವೇ ಹುಡುಕಿ ಬಂದಿದೆ. ಕೃಷ್ಣ ಸಮರ್ಥ್ ಎಂಬುವವರು ನಿರ್ಮಿಸಲಿರುವ 'ಬ್ರೂಸ್ಲಿ' ಚಿತ್ರದಲ್ಲಿ ಅವರು ನಟಿಸಲಿದ್ದಾರೆ.
'ತಾಜ್‌ಮಹಲ್' ಯಶಸ್ಸು ಅನೇಕರಿಗೆ ಹೆಸರು ಕೀರ್ತಿ ಹಣ ತಂದು ಕೊಟ್ಟಿದೆ. ಚಿತ್ರದ ನಿರ್ದೇಶಕ ಚಂದ್ರು ಅವರನ್ನು ರಾಕ್‌ಲೈನ್ ವೆಂಕಟೇಶ್ ಮನೆಗೆ ಕರೆದು ತಮಗೆ ಚಿತ್ರವೊಂದನ್ನು ಮಾಡಿಕೊಡುವಂತೆ ಕೇಳಿದ್ದಾರಂತೆ. ಪುನೀತ್ ಕೂಡಾ ಉತ್ತಮ ಕಥೆಯನ್ನು ಸಿದ್ಧಪಡಿಸಿ ಎಂದಿದ್ದಾರಂತೆ.
'ತಾಜ್‌ಮಹಲ್' ಚಿತ್ರದಿಂದ ಚಂದ್ರು, ಓಡಾಡಲು ಒಂದು ಕಾರು, ಊರಿನಲ್ಲಿ ಒಂದು ಮನೆ ಕಟ್ಟಿಸಿದ್ದರ ಜೊತೆಗೆ ಬೆಂಗಳೂರಿನಲ್ಲಿ ಒಂದು ಸೈಟು ಖರೀದಿಸಲು ಆಲೋಚಿಸಿದ್ದಾರಂತೆ. ಅಂದರೆ ಎಷ್ಟು ಗಳಿಸಿದ್ದಾರೆ ಎಂದು ನೀವೇ ಊಹಿಸಿ.