ಜೋಸೈಮನ್ ಚಿತ್ರವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ. 'ಪ್ರೇಮಂ ಶರಣಂ ಗಚ್ಛಾಮಿ' ಚಿತ್ರದ ಹೆಸರು. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ತಯಾರಾಗುತ್ತಿರುವುದು ವಿಶೇಷ.
ಚಿತ್ರಕ್ಕೆ ಕಥೆ ಬರೆದಿರುವ ಪೀಟರ್ ಪ್ರಸಾದ್ ಅವರೇ ಚಿತ್ರ ನಿರ್ಮಿಸುತ್ತಿದ್ದಾರೆ. ಜೋಸೈಮನ್ ಅವರೇ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಇದು ನನ್ನ ಮಹತ್ವಾಕಾಂಕ್ಷೆಯ ಚಿತ್ರ. ರಾಷ್ಟ್ರೀಯ ಏಕತೆ ಸಾರುವ ಚಿತ್ರವನ್ನು ಪ್ರೇಮಕಥೆಯ ಹಿನ್ನೆಲೆಯಲ್ಲಿ ನಿರೂಪಿಸುತ್ತಿದ್ದೇನೆ ಎಂದರು.
ಚಿತ್ರದ ನಾಯಕನ ಪಾತ್ರಕ್ಕಾಗಿ ಹೊಸ ಮೂಖದ ಹುಡುಕಾಟದಲ್ಲಿದ್ದಾರೆ. ಬಾಲಿವುಡ್ ತಾರೆ ಚಿತ್ರದ ನಾಯಕಿಯಾಗಿರುತ್ತಾಳೆ. ಉತ್ತರ ಹಾಗೂ ದಕ್ಷಿಣದ ಪ್ರೇಕ್ಷಕರಿಗೆ ಪರಿಚಯವಿರುವ ಅನೇಕ ಕಲಾವಿದರು ಚಿತ್ರದಲ್ಲಿದ್ದಾರಂತೆ.