ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅನಾಥೆಯ 'ಮುದ್ದು ಮನಸು'
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡ ಚಿತ್ರರಂಗದಲ್ಲಿ ದಿನಾಲೂ ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇರುತ್ತವೆ. ಈ ಸಾಲಿಗೆ ಈಗ 'ಮುದ್ದು ಮನಸ್ಸು' ಚಿತ್ರ ಕೂಡಾ ಸೇರುತ್ತದೆ. ನಿರ್ದೇಶಕ ಸೂರಿಯನ್ ಈ ಚಿತ್ರಕ್ಕೆ ಕೈ ಹಾಕಿದ್ದಾರೆ.

ಇದು ಒಬ್ಬ ಫೋಟೋಗ್ರಾಫರ್ ಬದುಕಿನ ಕಥೆ. ಇಲ್ಲಿ ಪ್ರೀತಿ, ತಾಳ್ಮೆ, ನೋವು, ನಲಿವು ಎಲ್ಲವೂ ಇರುತ್ತದೆ. ಜತೆಗೆ ನಾಯಕಿಯೂ ಇರುತ್ತಾಳೆ. ಆದರೆ ಅವಳು ಅನಾಥೆಯಾಗಿರುತ್ತಾಳೆ ಎಂದರು ನಿರ್ದೇಶಕರು.
MOKSHA
ಹೊಸ ಹುಡುಗ ವರ್ಷ ಈ ಚಿತ್ರದ ನಾಯಕ. ಈತನ ನಿಜ ಹೆಸರು ರಾಘವೇಂದ್ರ. ಚಿತ್ರರಂಗಕ್ಕಾಗಿ 30 ವರ್ಷ ದುಡಿದಿರುವ ಸಿನಿಮಾ ಯುನಿಟ್ ವ್ಯಾನ್ ಡ್ರೈವರ್ ಚಂದ್ರಪ್ಪನವರ ಮಗ ಎಂಬುದು ಗಮನಾರ್ಹ ಅಂಶ. ಹೊಸ ಹುಡುಗಿ ತಾರಾ ನಾಯಕಿ. ಈಕೆಯ ಮೂಲ ಹೆಸರು ಅದ್ವಿತಿ. ರಾಜರತ್ನ ಛಾಯಾಗ್ರಹಣವಿದೆ. ದತ್ತಪೀಠ, ಮುಳ್ಳಯ್ಯನಗಿರಿ ಬೆಟ್ಟ, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಎಂಟು ಜನ ಉಪನಾಯಕಿಯರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೂರಿಯನ್ ಮುದ್ದುಮನಸ್ಸು ವರ್ಷ ತಾರಾ